ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ
Monday, April 06, 2026
ಮಾನಸಿಕ ಖಿನ್ನತೆ ಒಳಗಾಗಿ ರಾತ್ರಿ ಹೊತ್ತು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊಪ್ಪಲ ಮೂಲದ ಬಸವನಗೌಡ (35) ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ. ಈತ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು ಸಾಯುವುದಾಗಿ ಗೋಗರೆದಿದ್ದಾನೆ. ಯುವಕನು ದೃಢಕಾಯನಾಗಿದ್ದು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲು ಹರ ಸಾಹಸ ಪಡಬೇಕಾಯಿತು. ರಕ್ಷಣಾ ಕಾರ್ಯದಲ್ಲಿ ಲಕ್ಷ್ಮಿಕಾಂತ ಭಟ್ ಹಾಗೂ ಶ್ರೀನಿವಾಸ್ ರಾವ್ ಸಹಕರಿಸಿದ್ದಾರೆ.
ಉಡುಪಿ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ. ಆತನ ಸಂಬಂಧಿಕರಿಗೂ ಮಾಹಿತಿ ನೀಡಲಾಗಿದ್ದು ವ್ಯಕ್ತಿಗೆ ಮನೋರೋಗ ಸಮಸ್ಯೆ ಇದ್ದು, ಉಡುಪಿಗೆ ಬರುವುದಾಗಿ ಹೇಳಿದ್ದಾರೆ.