ಮಾರುತಿ ವಿಥಿಕಾದಲ್ಲಿ ಉಚಿತ ಕುಡಿಯುವ ನೀರಿನ "ಅರವಟ್ಟಿಗೆ ವ್ಯವಸ್ಥೆ" ಉದ್ಘಾಟನೆ
Friday, April 03, 2026
ಉಡುಪಿ ನಗರದಲ್ಲಿ ಸುಡು ಬಿಸಿಲಿನ ತಾಪಮಾನವು ಹೆಚ್ಚಿದ್ದು, ಸಾರ್ವಜನಿಕರ ದಾಹ ತಣಿಸಲು ಉಡುಪಿ ಜಿಲ್ಲಾ ನಾಗರೀಕ ಸಮಿತಿಯು, ಜೋಸ್ ಆಲುಕ್ಕಾಸ್ ಆಭರಣ ಮಳಿಗೆಯ ಸಹಕಾರದಿಂದ ಉಡುಪಿಯ ಮಾರುತಿ ವಿಥಿಕಾದಲ್ಲಿ ಅರವಟ್ಟಿಗೆ ವ್ಯವಸ್ಥೆ ಮಾಡಿದ್ದು , ಇದನ್ನು ಗುರುವಾರ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಣಿಪಾಲ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಡಿ.ಎಚ್.ಓ ಬಸವರಾಜ ಹುಬ್ಬಳ್ಳಿ, ಸಮಾಜಸೇವಕ ನರಸಿಂಹ ಭಟ್ ಮಣಿಪಾಲ, ಜೋಸ್ ಅಲುಕ್ಕಾಸ್ ಮಳಿಗೆಯ ಮೆನೇಜರ್ ರಾಜೇಶ್, ಎನ್ ಆರ್, ಮತ್ತು ಗೋಪಾಲ್, ಉದ್ಯಮಿ ಉದಯ ಕುಮಾರ್, ಕೊಟೆಕ್ ಮಹೀಂದ್ರ ಬ್ಯಾಂಕಿನ ರಾಹುಲ್, ವಿಷ್ಣು, ಮತ್ತು ಸಿಬಂದಿಗಳು ಭಾಗಿಯಾಗಿದ್ದರು.
ಹನುಮಾನ್ ಜಯಂತಿಯ ಪ್ರಯುಕ್ತವಾಗಿ ಪಾನಕ ಸೇವೆಯನ್ನು ಸುದರ್ಶನ್ ನಾಯಕ್ ನೀಡಿದರು. ಅರವಟ್ಟಿಗೆಯಲ್ಲಿ ನಿತ್ಯವು ಮೃತ್ತಿಕೆಯ ಹೂಜಿಯಲ್ಲಿ ಸಂಗ್ರಹಿಸಿಟ್ಟಿರುವ ಪರಿಶುದ್ಧ ತಂಪು ನೀರು ಹಾಗೂ ಹಣ್ಣು ಹಂಪಲುಗಳ ಪಾನೀಯಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಈ ಯೋಜನೆ ಮಳೆಗಾಲ ಆರಂಭದವರೆಗೆ ಮುಂದುವರಿಯಲಿದೆ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.
.jpeg)