-->
 ಕೊಡವೂರು ದೇವಸ್ಥಾನ- ಕೊಡವೂರು ಬ್ರಾಹ್ಮಣ ಸಭಾ ಜಂಟಿ ಸಭೆ

ಕೊಡವೂರು ದೇವಸ್ಥಾನ- ಕೊಡವೂರು ಬ್ರಾಹ್ಮಣ ಸಭಾ ಜಂಟಿ ಸಭೆ


ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ನಡೆಯಲಿರುವ ಮಹಾ ರುದ್ರಯಾಗದ ಪೂರ್ವಭಾವಿಯಾಗಿ ಇಂದು ಬ್ರಾಹ್ಮಣ ಮಹಾಸಭಾ ಕೊಡವೂರಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಭೆ ನಡೆದು ಬ್ರಾಹ್ಮಣ ಮಹಾಸಭಾ ವತಿಯಿಂದ ಸಂಪೂರ್ಣ ಸಹಕಾರ ವಿನಂತಿಸಿಕೊಳ್ಳಲಾಯಿತು.

ಶಂಕರ ನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಶ್ರೀ ಶಂಕರ ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ಜನಾರ್ದನ ಕೊಡವೂರು, ಮಹಾರುದ್ರ ಯಾಗ ಸಮಿತಿಯ  ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ ಮತ್ತು ತಾರಾನಾಥ್, ಬ್ರಾಹ್ಮಣ ಮಹಾಸಭಾ ಕೊಡವೂರಿನ ಅಧ್ಯಕ್ಷ ಸುರೇಂದ್ರ ಉಪಾಧ್ಯಾಯ,ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್,ಗೌರವಾಧ್ಯಕ್ಷರಾದ ಪಿ ಗುರುರಾಜ್ ರಾವ್, ಗೋವಿಂದ ಐತಾಳ್, ಗೌರವ ಸಲಹೆಗಾರರಾದ ನಾರಾಯಣ ಬಲ್ಲಾಳ್, ಮಂಜುನಾಥ ಭಟ್, ಕಾರ್ಯಾಧ್ಯಕ್ಷ ಶ್ರೀನಿವಾಸ್ ಉಪಾಧ್ಯ, ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ಕೋಶಾಧಿಕಾರಿ ಚಂದ್ರಶೇಖರ್ ರಾವ್, ಮಹಾ ರುದ್ರ ಯಾಗ ಪ್ರಚಾರ ಸಮಿತಿಯ ಶ್ರೀಶ ಬಲ್ಲಾಳ್, ಪ್ರಸನ್ನ ಕೊಡವೂರು, ಮಹಿಳಾ ಸಮಿತಿಯ ಸಂಚಾಲಕರಾದ ಪೂರ್ಣಿಮಾ ಜನಾರ್ದನ್  ಹಾಗೂ  ಸದಸ್ಯರಾದ ಅಶ್ವಿನಿ ಶ್ರೀನಿವಾಸ್, ಭಾರತಿ ಸುಬ್ರಮಣ್ಯ, ಪವಿತ್ರ ಸಾಮಗ, ಮಾಧವಿ ಸಾಮಗ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article