-->
ಹಸೆಮಣೆ ಏರಲು ಸಜ್ಜಾದ ಕಾಮಿಡಿ ಕಿಲಾಡಿಗಳು ಅನೀಶ್ ಪೂಜಾರಿ

ಹಸೆಮಣೆ ಏರಲು ಸಜ್ಜಾದ ಕಾಮಿಡಿ ಕಿಲಾಡಿಗಳು ಅನೀಶ್ ಪೂಜಾರಿ


ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ನಾಳೆ ಏ. 5ರಂದು ಅನೀಶ್ ಪೂಜಾರಿ ಅವರು ಶೃತಿ ಅವರೊಂದಿಗೆ ವೈವಾಹಿಕ ಜೀವನಕ್ಕ್ಕೆ ಕಾಲಿರಿಸಲಿದ್ದಾರೆ.


ʻದಸ್ಕತ್‌ʼ ಸಿನಿಮಾದ ನಿರ್ದೇಶಕ ಅನೀಶ್‌ ಪೂಜಾರಿ - ಶೃತಿ ಅವರ ವಿವಾಹ ಸಮಾರಂಭವು ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆಯಲಿದೆ. ಅನೀಶ್‌ ಪೂಜಾರಿ ಅವರ ಮನೆಯಲ್ಲಿ ಈಗಾಗಲೇ ಮದುವೆಯ ಸಂಭ್ರಮ ಮನೆ ಮಾಡಿದ್ದು, ವಿವಾಹ ಪೂರ್ವ ಶಾಸ್ತ್ರಗಳು ಜೋರಾಗಿ ನಡೆಯುತ್ತಿವೆ.

ಇತ್ತೀಚೆಗಷ್ಟೇ ಮೆಹಂದಿ ಶಾಸ್ತ್ರ ಸಖತ್‌ ಗ್ರ್ಯಾಂಡ್‌ ಆಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಪಾಲ್ಗೊಂಡು ಸಂಭ್ರಮಿಸಿದ್ದಾರೆ. ವಿಶೇಷ ಅಂತಂದರೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್‌, ದೀಪಿಕಾ, ಪ್ರವೀಣ್‌ ಜೈನ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. 


Ads on article

Advertise in articles 1

advertising articles 2

Advertise under the article