ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನ ರಕ್ಷಣೆ (Video)
Wednesday, April 15, 2026
ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಪ್ರವೇಶ ದ್ವಾರದ ಮೇಲ್ಭಾಗದ ಗೋಪುರದಿಂದ ಜಿಗಿದು ಆತ್ಯಹತ್ಯೆಗೆ ಯತ್ನಿಸಿದ್ದ ಯುವಕನನ್ನು ರೈಲ್ವೇ ಆರ್ ಪಿ ಎಫ್ ಪಡೆಯವರು ರಕ್ಷಿಸಿದ್ದಾರೆ.
ಯುವಕ ಪಶ್ಚಿಮ ಬಂಗಾಳದ ದಿನಜಪುರದ ಸುಬರತ್ ಮರ್ಮು (28) ಎಂದು ತಿಳಿದುಬಂದಿದೆ. ಸಹೋದರಿಯ ಅಗಲಿಕೆಯಿಂದ ಬಹಳವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಯುವಕ ಹೇಳಿಕೊಂಡಿದ್ದಾನೆ. ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿರುವುದರಿಂದ, ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಚರಣೆಯಲ್ಲಿ ಆರ್ ಪಿ ಎಫ್ ಜೀನಾ ಪಿಂಟೋ ಭಾಗಿಯಾಗಿದ್ದರು. ವಾರಸುದಾರರು ಇದ್ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.