ಮೇ 30: ಸುಶಾನ್ ಟ್ರಸ್ಟ್ ಕೊಡ್ಲಾಡಿ ಇದರ ವಾರ್ಷಿಕ ಕಾರ್ಯಕ್ರಮ, ಸಂವಾದ
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸ್ಥಾಪಿಸಿರುವ ಸುಶಾನ್ ಟ್ರಸ್ಟ್ ಕೊಡ್ಲಾಡಿ ಇದರ ವತಿಯಿಂದ ಕಿರುಚಿತ್ರ ಬಿಡುಗಡೆ, ವಿಚಾರಗೋಷ್ಠಿ ಹಾಗು ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಮೇ 30 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಸಂಚಾಲಕ ಕಿರಣ್ ಶೆಟ್ಟಿ ಕೊಡ್ಲಾಡಿ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ 30 ರಂದು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ , ಸಿಇಓ ಪ್ರತೀಕ್ ಬಾಯಲ್ ಉದ್ಘಾಟಿಸಲಿದ್ದಾರೆ. ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಪರಿಸರ- ವಿಜ್ಞಾನ ಮಾತುಕತೆ ನಡೆಯಲಿದ್ದು, ಟೀಚರ್ ಶೈಕ್ಷಣಿಕ ಪತ್ರಿಕೆ ಇದರ ಸಂಪಾದಕ ಉದಯ ಗಾಂವ್ಕರ್ ಸಂವಾದ ನಡೆಸಿಕೊಡಲಿದ್ದಾರೆ ಎಂದರು.
ಸುಶಾನ್ ಟ್ರಸ್ಟ್ ಕೊಡ್ಲಾಡಿ ವತಿಯಿಂದ ಈಗಾಗಲೇ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ "ನಮ್ಮ ಸುತ್ತಲಿನ ಪ್ಲಾಸ್ಟಿಕ್ ಸಮಸ್ಯೆಗಳು ಮತ್ತು ಸೂಕ್ತ ಪರಿಹಾರಗಳು" ಎಂಬ ವಿಷಯದ ಕುರಿತು ಪ್ರಬಂಧಗಳನ್ನು ಆಹ್ವಾನಿಸಲಾಗಿದ್ದು, ಅದರಲ್ಲಿ 105 ಪ್ರಬಂಧಗಳು ಬಂದಿದೆ. ಅದರಲ್ಲಿ 6 ಪ್ರಬಂಧಗಳನ್ನು ಇಬ್ಬರು ತಜ್ಞರ ಸಮಿತಿಯ ಮೂಲಕ ಆಯ್ಕೆ ಮಾಡಲಾಗಿದೆ. ಪ್ರಬಂಧ ಸ್ಪರ್ಧೆಯ ವಿಜೇತರಿಗೂ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದ ಮೂರನೇ ಹಂತದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಂಡ್ಸೆ ಎಸ್ ಎಲ್ ಆರ್ ಎಂ ಘಟಕದ ಕುರಿತಾದ ಕಿರುಚಿತ್ರ ಬಿಡುಗಡೆ ನಡೆಯಲಿದೆ. ಅಲ್ಲದೇ ಜಾಗತಿಕ ಹವಾಮಾನ ವೈಪರಿತ್ಯ- ವಿಚಾರ ಗೋಷ್ಟಿ ನಡೆಯಲಿದ್ದು, ಪರಿಸರ ಚಿಂತಕ ನಾಗರಾಜ ಕೂವೆ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಮಣಿಪಾಲ ಸಂವಹನ ಸಂಸ್ಥೆ ಪೂರ್ವ ನಿರ್ದೇಶಕ ಡಾ. ವರದೇಶ ಹಿರೇಗಂಗೆ ಭಾಗವಹಿಸಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸುಶಾನ್ ಟ್ರಸ್ಟ್ ನ ಪ್ರಮುಉಖರಾದ ಅರುಣ್ ಶೆಟ್ಟಿ ಕೊಡ್ಲಾಡಿ, ವಸುದಾ ಶೆಟ್ಟಿ ಹಾಗೂ ದಿಯಾ ಶೆಟ್ಟಿ ಉಪಸ್ಥಿತರಿದ್ದರು.