-->
 ಉಡುಪಿ ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ

ಉಡುಪಿ ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ


ಸೇವಾ ನಿವೃತ್ತಿ ಹೊಂದಿದ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭವು ಉಡುಪಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನೆರವೇರಿತು.

                                                     (ಪಿಎಸ್ಐ ನಾರಾಯಣ ಬದಿಯಡ್ಕ)
ಉಡುಪಿ ನಗರ ಠಾಣೆಯ ಪಿಎಸ್ಐ ನಾರಾಯಣ ಬದಿಯಡ್ಕ, ಕಾರ್ಕಳ ಠಾಣೆಯ ಪಿಎಸ್ಐ ಸುಂದರನ್, ಸಿಎಸ್ಪಿ ಎಸ್ಐ ಪ್ರದೀಪ್, ಬ್ರಹ್ಮಾವರ ಠಾಣೆಯ ಎಎಸ್ಐ ಕೃಷ್ಣಪ್ಪ, ಹೆಬ್ರಿ ಠಾಣೆಯ ಶ್ರೀಧರ್ ಕಾಸರಗೋಡು ಇವರನ್ನು ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಅಲ್ಲದೇ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಈ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಜೊತೆಗಿದ್ದರು.  

Ads on article

Advertise in articles 1

advertising articles 2

Advertise under the article