-->
ಕೊಡವೂರು ಮಹಾರುದ್ರಯಾಗ: ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ

ಕೊಡವೂರು ಮಹಾರುದ್ರಯಾಗ: ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ


ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾರುದ್ರಯಾಗದ ಪ್ರಯುಕ್ತ ಅದ್ದೂರಿ ಹಸಿರು ಹೊರೆಕಾಣಿಕೆ ಮೆರವಣಿಗೆ ಗುರುವಾರ ಸಂಜೆ ಅದ್ಧೂರಿಯಾಗಿ ನಡೆಯಿತು.


ಮಲ್ಪೆ ಅಯ್ಯಪ್ಪ ಮಂದಿರದಲ್ಲಿ ಬ್ರಹ್ಮಶ್ರೀ ಆನಂದ ಸಿದ್ದ ಪೀಠದ ಸಂಸ್ಥಾಪಕರಾದ ಶ್ರೀ ಮಹರ್ಷಿ ಆನಂದ ಗುರೂಜಿ ಪೂಜೆ ಸಲ್ಲಿಸಿ, ಬಳಿಕ ಕೇಸರಿ ಬಾವುಟ ಹಾರಿಸುವುದರ ಮೂಲಕ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.



ಬಳಿಕ ಆರಂಭಗೊಂಡ ವೈಭವದ ಮೆರವಣಿಗೆ ಕೊಡುವೂರು ದೇವಸ್ಥಾನಕ್ಕೆ ಬಂದು ತಲುಪಿತು. ಮೆರವಣಿಯುದ್ಧಕ್ಕೂ ಕೊಂಬು, ವಾದ್ಯ, ನಾಸಿಕ್ ಬ್ಯಾಂಡ್, ಡೋಲು, ಯಕ್ಷಗಾನ ವೇಷಧಾರಿಗಳು, ತಟ್ಟಿರಾಯ, ಕಲ್ಲಡ್ಕ ಗೊಂಬೆಗಳು, ಕೀಲು ಕುದುರೆ, ಹುಲಿವೇಷಧಾರಿ, ಕುಣಿತ ಭಜನೆ ಹಾಗೂ ವಿವಿಧ ಆಕರ್ಷಕ ಟ್ಯಾಬ್ಲೊಗಳು, ಜಾನಪದ ಕಲಾವಿದರು ಗಮನಸೆಳೆದರು. ಕಲಶ ಕೈ ಹಿಡಿದುಕೊಂಡು ರಸ್ತೆಯುದ್ಧಕ್ಕೂ ಸಾಗಿಬಂದ ಮಹಿಳೆಯರು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದರು. 


ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ದೇವಳದ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು, ಉದ್ಯಮಿ ಹರಿಯಪ್ಪ ಕೋಟ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಕೊಡವೂರು ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು, ಮಹಾರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ತಾರನಾಥ ಪೂಜಾರಿ, ಕೆ ಕೃಷ್ಣಮೂರ್ತಿ ಆಚಾರ್ಯ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು ರಮೇಶ್ ತಿಂಗಳಾಯ, ವಿಜಯ ಕೊಡವೂರು, ಪ್ರಖ್ಯಾತ್ ಶೆಟ್ಟಿ ಯತೀಶ್ ಕರ್ಕೇರಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.




ನೂರಕ್ಕೂ ಅಧಿಕ ವಾಹನಗಳಲ್ಲಿ ತೆಂಗಿನಕಾಯಿ, ಹಲಸಿನಕಾಯಿ, ಬೆಲ್ಲ, ದವಸ ಧಾನ್ಯಗಳು, ಅಕ್ಕಿ, ಕಲ್ಲಂಗಡಿ ಹಾಗೂ ವಿವಿಧ ಸಾಮಗ್ರಿಗಳು ದೇವಸ್ಥಾನಕ್ಕೆ ಬಂದು ತಲುಪಿದವು.








Ads on article

Advertise in articles 1

advertising articles 2

Advertise under the article