ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶೆ ಬಿ.ಎಸ್. ಇಂದ್ರಕಲಾ ನಿಧನ
Friday, May 22, 2026
ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶೆ ಬಿ.ಎಸ್. ಇಂದ್ರಕಲಾ (73) ಗುರುವಾರ ವಾಷಿಂಗ್ಟನ್‌ನಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದ್ರಕಲಾ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ವಾಮಂಜೂರಿನ ಕುಟುಂಬವೊಂದರ ಸಾಮೂಹಿಕ ಹತ್ಯೆ ಪ್ರಕರಣದ ಆರೋಪಿ ವಾಮಂಜೂರು ಪ್ರವೀಣ್‌ಗೆ ಮರಣದಂಡನೆ ವಿಧಿಸಿದ್ದರು. ಇದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಪ್ರಕರಣವಾಗಿತ್ತು.
ಇಂದ್ರಕಲಾ ಹಲವು ಸಮಯದಿಂದ ತಮ್ಮ ಕುಟುಂಬದವರ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದರು. ಅಮೆರಿಕಾದ ಬೆಥೆಸ್ಡಾ ಮೇರಿಲ್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.