-->
ಮಡಿಕೇರಿಯ ದುಬಾರೆಯಲ್ಲಿ ಆನೆಗಳ ಕಾದಾಟ: ಮಹಿಳೆ ಬಲಿ (ವೀಡಿಯೊ)

ಮಡಿಕೇರಿಯ ದುಬಾರೆಯಲ್ಲಿ ಆನೆಗಳ ಕಾದಾಟ: ಮಹಿಳೆ ಬಲಿ (ವೀಡಿಯೊ)


ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಸಂಜೆ ಆನೆಗಳ ಸ್ನಾನದ ವೇಳೆ ನಡೆದ ಕಾದಾಟದಲ್ಲಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆಯೊಬ್ಬರು ಆನೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. 

ದುಬಾರೆಯ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ವೇಳೆ 'ಕಂಜನ್' ಎಂಬ ಆನೆಯು 'ಮಾರ್ತಾಂಡ' ಹೆಸರಿನ ಆನೆಗೆ ಜೋರಾಗಿ ತಿವಿದಿದೆ. ಆನೆಗಳ ನಡುವೆ ಏಕಾಏಕಿ ಕಾದಾಟ ಶುರುವಾಗಿ ಜನ ಆತಂಕಗೊಂಡಿದ್ದಾರೆ. ಈ ಕಾದಾಟದ ವೇಳೆ ಆನೆಯೊಂದು ಹತೋಟಿ ತಪ್ಪಿ ಪ್ರವಾಸಿ ಮಹಿಳೆಯ‌ ಮೇಲೆ ಬಿದ್ದಿದೆ. ಆನೆಯ ಭಾರಕ್ಕೆ ಸಿಲುಕಿದ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಮಹಿಳೆಯನ್ನು ತಮಿಳುನಾಡು ಮೂಲದ ಜ್ಯುನೇಶ ಎಂದು ಗುರುತಿಸಲಾಗಿದೆ.



Ads on article

Advertise in articles 1

advertising articles 2

Advertise under the article