‘ಹರ್ಷ’ದ ಜನರಲ್ ಮ್ಯಾನೇಜರ್ ರಮೇಶ್ ಕಲ್ಮಂಜೆ ನಿಧನ
Monday, May 18, 2026
ಉಡುಪಿ ಮೂಲದ ಇಲೆಕ್ಟ್ರಾನಿಕ್ ಉತ್ಪನ್ನಗಳ ರಿಟೇಲ್ ಸಂಸ್ಥೆ ಹರ್ಷದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ದೆಂದೂರುಕಟ್ಟೆ ಸಮೀಪದ ಕಲ್ಮಂಜೆ ನಿವಾಸಿ ರಮೇಶ್ ಕಲ್ಮಂಜೆ ನಿನ್ನೆ (ಭಾನುವಾರ) ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಹರ್ಷದ ಆರಂಭದಿಂದಲೂ ಸಂಸ್ಥೆಯ ವಿವಿಧ ವಿಭಾಗಗಳು ಹಾಗೂ ವಿವಿಧ ಶಾಖೆಗಳಲ್ಲಿ ದುಡಿದ ರಮೇಶ್ ಕಲ್ಮಂಜೆ ಕಾರ್ಯದಕ್ಷತೆ ಹಾಗೂ ನಿಯತ್ತಿಗೆ ಹೆಸರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಇಂದು ಬೆಳಿಗ್ಗೆ 10 ಗಂಟೆ ಬಳಿಕ ನಡೆಯಲಿದೆ.