Home › Uncategories › ಉಡುಪಿಯಲ್ಲಿ ಖಾಸಗಿ ಮೆಡಿಕಲ್ ಗಳು ಬಂದ್
ಉಡುಪಿಯಲ್ಲಿ ಖಾಸಗಿ ಮೆಡಿಕಲ್ ಗಳು ಬಂದ್
Wednesday, May 20, 2026
ಆನ್‌ಲೈನ್ ಮೆಡಿಸಿನ್ ಮಾರಾಟ (ಇ-ಫಾರ್ಮಸಿ) ಮತ್ತು ಭಾರಿ ರಿಯಾಯಿತಿ ನೀಡುವುದನ್ನು ವಿರೋಧಿಸಿ ಇಂದು ಉಡುಪಿ ಜಿಲ್ಲೆಯಾದ್ಯಂತ ಖಾಸಗಿ ಮೆಡಿಕಲ್ ಶಾಪ್‌ಗಳು ಬಂದ್ ಆಗಿವೆ.
ಉಡುಪಿ ಜಿಲ್ಲಾ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಈ ದೇಶವ್ಯಾಪಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು, ಜಿಲ್ಲೆಯ ಬಹುತೇಕ ಖಾಸಗಿ ಔಷಧ ಮಳಿಗೆಗಳು ಇಂದು ಕಾರ್ಯನಿರ್ವಹಿಸುತ್ತಿಲ್ಲ. ಜನ ಔಷಧಿ, ಅಪೋಲೋ ಫಾರ್ಮಸಿಗಳು, ಮೆಡ್ ಪ್ಲಸ್ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಅಂಗಡಿಗಳು ತೆರೆದಿದೆ.