ಪಣಿಯಾಡಿಯಲ್ಲಿ ಭಾಗವತ ಸಪ್ತಾಹ ಪ್ರವಚನಕ್ಕೆ ಚಾಲನೆ
Friday, May 22, 2026
ಅಧಿಕ ಮಾಸದ ಅಂಗವಾಗಿ ಪಣಿಯಾಡಿಯ ಶ್ರೀ ಅನಂತಾನಂತ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಯೋಜಿಸಲಾದ ಭಾಗವತ ಸಪ್ತಾಹ ಪ್ರವಚನ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು.
ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕೆ. ರಾಘವೇಂದ್ರ ಭಟ್ ಹಾಗೂ ಖ್ಯಾತ ಪ್ರವಚನಕಾರ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಸೇವಾಕರ್ತರಾದ ರಾಮಚಂದ್ರ ಅನಸೂಯ ಆಚಾರ್ಯ ದಂಪತಿಗಳು, ಕೃಷ್ಣಮೂರ್ತಿ ಆಚಾರ್ಯ, ಅನಂತ ವಿಪ್ರ ಬಳಗದ ರಘುಪತಿ ಸವಿತಾ ಭಟ್ ದಂಪತಿಗಳು ಸೇರಿದಂತೆ ಹಲವು ಭಕ್ತರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುಮಾರು 90 ನಿಮಿಷಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಭಗವತ ತತ್ತ್ವ, ಧಾರ್ಮಿಕ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವದ ಕುರಿತು ಜ್ಞಾನಪೂರ್ಣ ಉಪನ್ಯಾಸ ನಡೆಯಿತು.
ಕಾರ್ಯಕ್ರಮವನ್ನು ಪಣಿಯಾಡಿ ಕೆ. ರಾಘವೇಂದ್ರ ಭಟ್ ಸ್ವಾಗತಿಸಿ ನಿರೂಪಿಸಿದರು.