-->
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ


ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ನಡೆದಿದೆ. 

ಮೃತರನ್ನು ಗೋವಾ ಮೂಲದ ಝಹೀರ್ ಎಂದು ಗುರುತಿಸಲಾಗಿದೆ. ಇವರು ತನ್ನ ಪತ್ನಿ ಮನೆಯಾದ ಬೆಳಪುವಿನಲ್ಲಿ ಆತಹತ್ಯೆ ಮಾಡಿಕೊಂಡಿದ್ದಾರೆ.  ಮೂಳೂರಿನ SDPI ಆ್ಯಂಬುಲೆನ್ಸ್ ಮೂಲಕ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗೂ ಹಮೀದ್ ಉಚ್ಚಿಲ  ಅವರ ಸಹಾಯದಿಂದ ಮೃತದೇಹವನ್ನು ಅಜ್ಜರಕಾಡಿನ ಶವಾಗಾರಕ್ಕೆ ಸಾಗಿಸಲಾಯಿತು. 

ಈ ಸಂದರ್ಭದಲ್ಲಿ ನಿಹಾದ್ ಮಜೂರು, ನಿಷಾದ್ ಮಜೂರು,ಇರ್ಫಾನ್ ಬೆಳಪು, ಶಮೀಮ್ ಬೆಳಪು ಹಾಗೂ ಶುಹೈಬ್ ಮಜೂರು ಕೂಡಾ ಸಹಕರಿಸಿದರು.

Ads on article

Advertise in articles 1

advertising articles 2

Advertise under the article