-->
ಮನೆ ಕಂಪೌಂಡ್ ಗೆ ಲಾರಿ ಡಿಕ್ಕಿ ಹೊಡೆದು ಪಲ್ಟಿ

ಮನೆ ಕಂಪೌಂಡ್ ಗೆ ಲಾರಿ ಡಿಕ್ಕಿ ಹೊಡೆದು ಪಲ್ಟಿ


ಲಾರಿಯೊಂದು ಮನೆ ಕಂಪೌಂಡ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೊಪ್ಪಲ ಎಂಬಲ್ಲಿ ನಡೆದಿದೆ.

ಬಿ.ಸಿ.ರೋಡ್‌ – ಪೊಳಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿ, ಬಿ.ಸಿ.ರೋಡ್‌ ಕಡೆಯಿಂದ ಬರುತ್ತಿದ್ದಾಗ ಏಕಾಏಕಿ ನಿಯಂತ್ರಣ ತಪ್ಪಿ ಜೆಫ್ರಿ ಫೆರ್ನಾಂಡಿಸ್ ಅವರ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ, ಅದರಲ್ಲಿ ತುಂಬಿದ್ದ ಇಂಟರ್‌ಲಾಕ್ ಸಿಮೆಂಟ್ ಬ್ಲಾಕ್‌ಗಳು ಮನೆಯ ಅಂಗಳ ಹಾಗೂ ಛಾವಣಿಯ ಮೇಲೆ ಬಿದ್ದಿವೆ. 

ಘಟನೆಯಿಂದಾಗಿ ಮನೆಯ ಗೋಡೆ, ಕಿಟಕಿ, ಬಾಗಿಲು, ಕಾಂಪೌಂಡ್, ಕಬ್ಬಿಣದ ಗೇಟ್  ಹಾನಿಗೊಳಗಾಗಿವೆ. ಈ ಅವಘಡದಿಂದ ಸುಮಾರು ರೂ. 2.50 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಘಾತದಲ್ಲಿ ಲಾರಿಗೂ ಹಾನಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Ads on article

Advertise in articles 1

advertising articles 2

Advertise under the article