ಬಿಜೆಪಿ ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ
ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ನೇಮಕ ಮಾಡಲಾಗಿದೆ. ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ವಿಜಯ ಕೊಡವೂರು ಅವರು ನೇಮಕಾತಿ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ನಗರಾಡಳಿತ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಕಡ ರಾಜು ಪೂಜಾರಿ ಹಾಗೂ ಸಹ ಸಂಚಾಲಕರಾಗಿ ಸಂತೋಷ್ ಜತ್ತನ್ ನಿಟ್ಟೂರು ಅವರನ್ನು ನೇಮಕ ಮಾಡಲಾಗಿದೆ. ಮೀನುಗಾರ ಪ್ರಕೋಷ್ಠದ ಸಂಚಾಲಕರಾಗಿ ಶರತ್ ಕುಮಾರ್ ಬೈಲಕೆರೆ ಹಾಗೂ ಸಹ ಸಂಚಾಲಕರಾಗಿ ಸಂದೀಪ್ ಅಮೀನ್ ಕೂರಾಡಿ ಆಯ್ಕೆಯಾಗಿದ್ದಾರೆ.ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾಗಿ ಡಾ. ವಿದ್ಯಾದರ ಶೆಟ್ಟಿ ಹಾಗೂ ಸಹ ಸಂಚಾಲಕರಾಗಿ ಡಾ. ರಾಮಚಂದ್ರ ಕಾಮತ್ ನೇಮಕಗೊಂಡಿದ್ದಾರೆ. ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕರಾಗಿ ಮಧ್ವನಗರ ಶಂಕರ ಪೂಜಾರಿ ಹಾಗೂ ಸಹ ಸಂಚಾಲಕರಾಗಿ ಕೃಷ್ಣಪ್ಪ ಜತ್ತನ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಕಾಶನ ಪ್ರಕೋಷ್ಠದ ಸಂಚಾಲಕರಾಗಿ ದುರ್ಗಾಪ್ರಸಾದ್ ಸಿ.ಹೆಚ್. ಹಾಗೂ ಸಹ ಸಂಚಾಲಕರಾಗಿ ಸತೀಶ್ ಎಸ್., ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರಾಗಿ ವಸಂತ ಕಿಣಿ ಹಾಗೂ ಸಹ ಸಂಚಾಲಕರಾಗಿ ಯೋಗೀಶ್ ಗುಡ್ರಿ ನೇಮಕಗೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಂಚಾಲಕರಾಗಿ ಅಕ್ಷಯ್ ಪಿ. ಶೆಟ್ಟಿ ಹಾಗೂ ಸಹ ಸಂಚಾಲಕರಾಗಿ ನರಸಿಂಹ ಗಾಂಸ್ಕರ್ ಅವರನ್ನು ನೇಮಕ ಮಾಡಲಾಗಿದೆ. ಮಾಧ್ಯಮ ವಿಭಾಗದ ಸಹ ಸಂಚಾಲಕರಾಗಿ ಮಂಜುನಾಥ್ ಮಣಿಪಾಲ ಅವರನ್ನು ನಿಯುಕ್ತಿಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.