ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ಧಾರ್ಮಿಕ ಕಾರ್ಯಕ್ರಮ, ಶನೀಶ್ವರ ಕಥೆ ಯಶಸ್ವಿ
ಶ್ರೀ ನಾರಾಯಣ ಗುರು ಯುವ ವೇದಿಕೆ ರಿ. ಉಡುಪಿ ಇದರ ವತಿಯಿಂದ ಶ್ರೀ ನಾರಾಯಣ ಗುರು ಉದ್ಯಾನವನ ಬಲಾಯಿಪಾದೆಯಲ್ಲಿ ಮೇ 14ರಿಂದ 16ರ ವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಮೇ 14ರಂದು ಯುವವಾಹಿನಿ ಉಡುಪಿ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಸಾರುವ ಗುರು ಸತ್ಸಂಗ ಕಾರ್ಯಕ್ರಮ ನೆರವೇರಿತು. ಯುವ ಪ್ರತಿಭೆ ಶ್ರೇಯಸ್ ಕೋಟ್ಯಾನ್ ಗುರು ಸಂದೇಶ ನೀಡಿದರು. ದಿನೇಶ್ ಜತ್ತನ್ ಅರೂರು ತೋಟ ಕಾರ್ಯಕ್ರಮ ನಿರ್ವಹಿಸಿದರು.
ಮೇ 15ರಂದು ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಬಿಲ್ಲವ ಸೇವಾ ಸಂಘ ಕುತ್ಪಾಡಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀ ವಿಠೋಬಾ ರುಕುಮಾಯಿ ಮಂದಿರ ಕಟ್ಟಡ ಸಮಿತಿಯ ಅಧ್ಯಕ್ಷರಾದ ರಘುನಾಥ್ ಕೋಟ್ಯಾನ್ ರವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ಭಾಸ್ಕರ್ ಸುವರ್ಣ ಕನ್ನರಪಾಡಿ ಕಾರ್ಯಕ್ರಮ ನಿರೂಪಿಸಿದರು. .
ಮೇ 16ರಂದು ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾ ಮಂಡಳಿ ರಿ. ಬೊಳ್ಜೆ ಇದರ ಸದಸ್ಯರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ರಮೇಶ್ ಜತ್ತನ್ ಬಬ್ಬರ್ ಜಿಡ್ಡ ಕಾರ್ಯಕ್ರಮ ನಿರ್ವಹಿಸಿದರು.
ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಅಧ್ಯಕ್ಷ ಮಿಥುನ್ ಅಮೀನ್ ಸಂತೆಕಟ್ಟೆ, ಉಪಾಧ್ಯಕ್ಷ ಶಬರೀಶ್ ಸುವರ್ಣ ಅಲೆವೂರು, ಸಾಯಿರಾಜ್ ಕಿದಿಯೂರು, ವಿಕೇಶ ಸುವರ್ಣ ಹೆಜಮಾಡಿ, ಮಹೇಶ್ ಪೂಜಾರಿ ಬೈಂದೂರು, ದಿವಾಕರ್ ಬೊಳ್ಜೆ, ಸಚಿನ್ ಸಾಲ್ಯಾನ್ ಉದ್ಯಾವರ , ಲಕ್ಷ್ಮಣ ಸನಿಲ್, ರಾಗು ಸನಿಲ್, ನವೀನ್ ಪೂಜಾರಿ, ದಿನೇಶ್ ಪೂಜಾರಿ, ಸುಪ್ರೀತ್ ಸುವರ್ಣ, ಪ್ರಸನ್ನ ಪೂಜಾರಿ ,ಶ್ರೀ ಸುಧಾಕರ್ ಬೊಲ್ಜೆ, ಶ್ರೀ ಸುನೀಲ್ ಪೂಜಾರಿ ಮಲ್ಪೆ, ಹರೀಶ್ ಪೂಜಾರಿ ಮಲ್ಪೆ, ಗುಣಕರ ಸನಿಲ್, ಮೋಹನ್ ಮತ್ತಿತರರಿದ್ದರು.