-->
ಪೆಟ್ರೋಲ್, ಡೀಸಲ್ ದರ ಲೀಟರ್ ಗೆ ತಲಾ ಮೂರು ರೂಪಾಿ ಏರಿಕೆ

ಪೆಟ್ರೋಲ್, ಡೀಸಲ್ ದರ ಲೀಟರ್ ಗೆ ತಲಾ ಮೂರು ರೂಪಾಿ ಏರಿಕೆ


ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, 
ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊಡೆತ ಎದುರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ ತಲಾ 3 ರೂಪಾಯಿಯಷ್ಟು ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಈ ಹೊಸ ದರ ಜಾರಿಗೆ ಬಂದಿದೆ. 

ದಿನಗಳ ಹಿಂದಷ್ಟೇ ಇಂಧನ ಮಿತ ವ್ಯಯಕ್ಕೆ ಪ್ರಧಾನಿ ಕರೆ ನೀಡಿಗಾಗಲೇ ಬೆಲೆ ಏರಿಕೆ ಸುಳಿವು ಸಿಕ್ಕಿತ್ತು.

ಉಡುಪಿಯಲ್ಲಿ ಗುರುವಾರ ರೂ. 102.41 ಇದ್ದ ಪೆಟ್ರೋಲ್ ದರ ಶುಕ್ರವಾರ ಬೆಳಿಗ್ಗಿನಿಂದಲೇ 105.67 ಆಗಿದೆ. ಅದೇ ರೀತಿ ರೂ. 90.48 ಇದ್ದ ಡೀಸೆಲ್ ದರ ಇಂದು ಬೆಳಿಗ್ಗೆ 93.59 ಆಗಿದೆ. 
ಬೆಲೆ ಏರಿಕೆಗೆ ವಾಹನ ಬಳಕೆದಾರರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಗೃಹ ಬಳಕೆಯ ಎಲ್ ಪಿ ಜಿ ದರವೂ ಏರಿಕೆಯ ಭೀತಿಯಲ್ಲಿ ಜನರಿದ್ದಾರೆ. 

Ads on article

Advertise in articles 1

advertising articles 2

Advertise under the article