-->
"ಮಳೆ ನೀರಲ್ಲ, ಡ್ರೈನೇಜ್ ಹೊಳೆ!" ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ

"ಮಳೆ ನೀರಲ್ಲ, ಡ್ರೈನೇಜ್ ಹೊಳೆ!" ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ


ಉಡುಪಿ ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಪಂಚರತ್ನ ಹೊಟೇಲ್ ಹಿಂಬದಿ ರಸ್ತೆಯಲ್ಲಿ ಡ್ರೈನೇಜ್ ನೀರು ಮಳೆ ನೀರಿನಂತೆ ರಸ್ತೆಯುದ್ದಕ್ಕೂ ಹರಿಯುತ್ತಿದ್ದು,ಗಬ್ಬು ನಾರುತ್ತಿದೆ. ಈ ಬಗ್ಗೆ ಹಲವು ಬಾರಿ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. 

                                       (ಡ್ರೈನೇಜ್ ನೀರು)
ಪಂಚರತ್ನ ಹೊಟೇಲ್ ಹಿಂಬದಿಯಿಂದ ಪಿಪಿಸಿ ಸಂಪರ್ಕಿಸುವ ರಸ್ತೆಯಲ್ಲಿ ಡ್ರೈನೇಜ್ ನೀರು ಮಳೆ ನೀರಿನಂತೆ ರಸ್ತೆಯುದ್ದಕ್ಕೂ ಹರಿಯುತ್ತಿದೆ. ಒಳಕಾಡು ವಾರ್ಡ್ ವ್ಯಾಪ್ತಿಗೆ ಬರುವ ಈ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಾದ ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಚರಂಡಿ ನಿರ್ಮಾಣಕ್ಕಾಗಿ ಕಾಮಗಾರಿ ಆರಂಭಿಸಿದ್ದರೂ ಅರ್ಧಕ್ಕೆ ಕಾಂಕ್ರೀಟ್ ಹಾಕಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು ಶೇಖರಗೊಂಡಿದೆ. ಕಳೆ ಗಿಡಗಳು ಬೆಳೆದು ಚರಂಡಿಯೇ ಮಾಯವಾಗಿದೆ. ಈ ಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇದೇ ಸಮಸ್ಯೆ ಎನ್ನುತ್ತಾರೆ ಸ್ಥಳೀಯರು.

                                           (ಮಳೆ ನೀರು)
ಸಮರ್ಪಕವಾದ ಚರಂಡಿ ನಿರ್ಮಿಸಲು ಗುತ್ತಿಗೆ ನೀಡಿ ಕಾಮಗಾರಿಯನ್ನೇನೋ ಆರಂಭಿಸಲಾಗಿತ್ತು. ಆದರೆ ಚರಂಡಿಗೆ ಅರ್ಧ ಕಾಂಕ್ರೀಟ್ ಹಾಕಿ ಕಾಮಗಾರಿಯನ್ನೇ ಕೈಬಿಡಲಾಗಿದೆ. ಮಳೆ ನೀರು ಹರಿದು ಹೋಗಬೇಕಾದ ಚರಂಡಿಯಲ್ಲಿ ಮಣ್ಣು ಶೇಖರಗೊಂಡಿದ್ದು, ಕಳೆಗಿಡಗಳು ಬೆಳೆದು ಚರಂಡಿಯೇ ಕಾಣದಂತಾಗಿದೆ. ಪರಿಣಾಮ ಪ್ರತೀ ಮಳೆಗಾಲದಲ್ಲೂ ರಸ್ತೆ ಹೊಳೆಯಂತಾಗಿ ನೀರು ನಿಲ್ಲುವ ಸಮಸ್ಯೆ ಎದುರಾಗುತ್ತಿದೆ. ಈ ಬಾರಿಯೂ ಇದಕ್ಕೆ ಮುಕ್ತಿ ಸಿಕ್ಕಿಲ್ಲ. ಹಲವು ಬಾರಿ ನಗರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆಯುದ್ದಕ್ಕೂ ಹರಿದು ತಗ್ಗು ಸ್ಥಳದ ರಸ್ತೆಯಲ್ಲಿ ಚರಂಡಿ ನೀರು ಶೇಖರಗೊಂಡು ರೋಗ ಹರಡುವ ಭೀತಿ ಎದುರಾಗಿದೆ."ಕಳೆದ ನಾಲ್ಕು ವರ್ಷಗಳಿಂದ ಇದೇ ಸಮಸ್ಯೆ ಇದೆ. ಹಲವಾರು ಬಾರಿ ನಗರಸಭೆಗೆ ದೂರು ನೀಡಿದ್ದೇವೆ. ಆದರೆ ಯಾರೂ ಗಮನಹರಿಸುತ್ತಿಲ್ಲ. ಡ್ರೈನೇಜ್ ನೀರಿನ ದುರ್ವಾಸನೆಯಿಂದ ಬದುಕುವುದು ಕಷ್ಟವಾಗಿದೆ. ಆದಷ್ಟು ಬೇಗ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರತಿ ವರ್ಷ ಮಳೆಗಾಲ ಬಂದಾಗ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಅಪೂರ್ಣ ಚರಂಡಿ ಕಾಮಗಾರಿ ಹಾಗೂ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.



Ads on article

Advertise in articles 1

advertising articles 2

Advertise under the article