-->
ಕುಂದಾಪುರ ಗ್ರಾ. ಪಂ ಕ್ಷೇತ್ರಗಳ ಮರು ವಿಂಗಡಣೆ: ಜೂ. 29ರವರೆಗೆ ಆಕ್ಷೇಪಣೆಗೆ ಆಹ್ವಾನ

ಕುಂದಾಪುರ ಗ್ರಾ. ಪಂ ಕ್ಷೇತ್ರಗಳ ಮರು ವಿಂಗಡಣೆ: ಜೂ. 29ರವರೆಗೆ ಆಕ್ಷೇಪಣೆಗೆ ಆಹ್ವಾನ


ಕುಂದಾಪುರ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ಪುನರ್‌ವಿಂಗಡಿಸಿ, ಪ್ರತಿ ಕ್ಷೇತ್ರಕ್ಕೆ ಹಂಚಿಕೆ ಮಾಡಲಾದ ಸದಸ್ಯ ಸ್ಥಾನಗಳ ಸಂಖ್ಯೆಯ ಕರಡು ಅಧಿಸೂಚನೆಯನ್ನು ಜಿಲ್ಲಾಡಳಿತ ಪ್ರಕಟಿಸಿದೆ. 


ಅಧಿಸೂಚನೆಯ ಪ್ರಕಾರ ಹೊಸಾಡು ಗ್ರಾಮ ಪಂಚಾಯತ್ ಮೂರು ಕ್ಷೇತ್ರಗಳಾಗಿ ಹಾಗೂ ಸೇನಾಪುರ ಗ್ರಾಮ ಪಂಚಾಯತ್ ಅನ್ನು ಎರಡು ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ.

ಹೊಸಾಡು ಗ್ರಾಮ ಪಂಚಾಯತ್:

ಹೊಸಾಡು–1 ಕ್ಷೇತ್ರ:
ಕಂಚಗೋಡು, ಜನತಾ ಕಾಲೋನಿ–1, ಜನತಾ ಕಾಲೋನಿ–2, ಖಾರ್ವಿಕೇರಿ ಹಾಗೂ ಹೊಸಾಡು ಗ್ರಾಮದ ವಾರ್ಡ್–1ರ ಮನೆ ಸಂಖ್ಯೆ 1ರಿಂದ 201ರವರೆಗಿನ ಪ್ರದೇಶಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಕ್ಕೆ 3 ಸದಸ್ಯ ಸ್ಥಾನಗಳು ಹಂಚಿಕೆ ಮಾಡಲಾಗಿದೆ.

ಹೊಸಾಡು–2 ಕ್ಷೇತ್ರ:
ಗಾಣದಮಕ್ಕಿ, ಕೇರಿಕೊಡ್ಲು, ಕಮ್ಮಾರಕೊಡ್ಲು, ಕಾಳುಮನೆ, ಕೋಟೆಮಕ್ಕಿ, ಮುಳ್ಳಿಕಟ್ಟಿ, ಕಡೇರಮನೆ, ಕೊಪ್ಪರಿ ಹಾಗೂ ಹೊಸಾಡು ಗ್ರಾಮದ ವಾರ್ಡ್–1ರ ಮನೆ ಸಂಖ್ಯೆ 202 ಮತ್ತು ಮೇಲ್ಪಟ್ಟ ಪ್ರದೇಶಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಕ್ಕೆ 2 ಸದಸ್ಯ ಸ್ಥಾನಗಳು ಮೀಸಲಾಗಿದೆ.

ಹೊಸಾಡು–3 ಕ್ಷೇತ್ರ:
ಅರಾಟೆ, ಒಳನಾಡು, ಸೊಬ್ರಹಿಟ್ಟು ಹಾಗೂ ಹೊಸಾಡು ಗ್ರಾಮದ ವಾರ್ಡ್–2ರ ಪ್ರದೇಶಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಕ್ಕೆ 3 ಸದಸ್ಯ ಸ್ಥಾನಗಳು ಹಂಚಿಕೆ ಮಾಡಲಾಗಿದೆ.

ಸೇನಾಪುರ ಗ್ರಾಮ ಪಂಚಾಯತ್: 

ಸೇನಾಪುರ–1 ಕ್ಷೇತ್ರ:
ಗುಡ್ಡೆಯಂಗಡಿ, ಬೆಳ್ಳಾಡಿ, ರೈಲ್ವೆ ಸ್ಟೇಶನ್, ರಾಮನಗರ, ಶಿವಾನಗರ ಹಾಗೂ ಸೇನಾಪುರ ಗ್ರಾಮದ ವಾರ್ಡ್–1ರ ಪ್ರದೇಶಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಕ್ಕೆ 4 ಸದಸ್ಯ ಸ್ಥಾನಗಳು ನಿಗದಿಪಡಿಸಲಾಗಿದೆ.

ಸೇನಾಪುರ–2 ಕ್ಷೇತ್ರ:
ಗುಡ್ಡಮ್ಮಾಡಿ, ಪರಂಕಳಿ, ಸಾಲಾಡಿ, ಒಳಬೈಲು ಹಾಗೂ ಸೇನಾಪುರ ಗ್ರಾಮದ ವಾರ್ಡ್–2ರ ಪ್ರದೇಶಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಕ್ಕೆ 3 ಸದಸ್ಯ ಸ್ಥಾನಗಳು ಹಂಚಿಕೆ ಮಾಡಲಾಗಿದೆ.

ಸರ್ಕಾರದ 2026ರ ಜೂನ್ 10ರ ತಿದ್ದುಪಡಿ ಸುತ್ತೋಲೆ ಅನ್ವಯ ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಕರಡು ಅಧಿಸೂಚನೆ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂನ್ 29ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿ ಅಥವಾ ಕುಂದಾಪುರ ತಹಶೀಲ್ದಾರರ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯ ನಂತರ, ಅಂದರೆ ಜೂನ್ 29ರ ಸಂಜೆ 5 ಗಂಟೆಯ ಬಳಿಕ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

Advertise in articles 1

advertising articles 2

Advertise under the article