ಗುಂಡ್ಮಿ ಕರುಣಾಕರ ಶೇರಿಗಾರ್ ನಿಧನ
Tuesday, July 07, 2026
ಸಾಸ್ತಾನದ ಗುಂಡ್ಮಿ ನಿವಾಸಿ, ಉದ್ಯಮಿ ಕರುಣಾಕರ ಶೇರಿಗಾರ (68) ಅಲ್ಪ ಕಾಲದ ಅಸೌಖ್ಯದ ಬಳಿಕ ಜುಲೈ 6ರಂದು ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾದ ಇವರು ಭೀಷ್ಮ, ಭಸ್ಮಾಸುರ, ಕರ್ಣ, ಪರಶುರಾಮ ಇತ್ಯಾದಿ ಪಾತ್ರಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ್ದರು. ಪ್ರಸಿದ್ಧ ಭಾಗವತರಾದ ಕಾಳಿಂಗ ನಾವಡರ ಅಭಿಮಾನಿಯೂ, ಆತ್ಮೀಯ ಒಡನಾಡಿಯೂ ಆಗಿದ್ದರು. ವಿದೇಶಗಳಲ್ಲೂ ಹಲವು ಪ್ರದರ್ಶನಗಳನ್ನು ನೀಡಿದ್ದ ಇವರು ಉಡುಪಿಯಲ್ಲಿಯೂ ಫೊಟೊ ಪ್ರಿಂಟಿಂಗ್ ಲ್ಯಾಬ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.