-->
 ಉಳ್ಳಾಲ ಕಡಲ ತೀರಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನುಗಳು..!

ಉಳ್ಳಾಲ ಕಡಲ ತೀರಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನುಗಳು..!


ಉಳ್ಳಾಲ ಕಡಲತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ಮುಗಿಬಿದ್ದ ಜನ ಮೀನುಗಳನ್ನು ಹೆಕ್ಕಿ ಮನೆಗೆ ಕೊಂಡೊಯ್ದಿದ್ದಾರೆ.  


ಅಲೆಗಳ ರಭಸದಿಂದ ಮರಳು ದಡಕ್ಕೆ ಬಂದ ಮೀನುಗಳಿಗೆ ಮತ್ತೆ ಸಮುದ್ರದೊಳಗೆ ಮರಳಲು ಸಾಧ್ಯವಾಗದೆ ತೀರದಲ್ಲೇ ಸಿಲುಕಿಕೊಂಡಿವೆ. ಈ ಸುದ್ದಿ ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡುತ್ತಿದ್ದಂತೆ ನೂರಾರು ಜನರು ಉಳ್ಳಾಲ ಕಡಲತೀರದತ್ತ ಧಾವಿಸಿದರು. ಕೈಗೆ ಸಿಕ್ಕ ಬಕೆಟ್‌ಗಳು, ಬುಟ್ಟಿಗಳು, ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ವಿವಿಧ ಪಾತ್ರೆಗಳೊಂದಿಗೆ ಬಂದ ಜನರು ಜೀವಂತವಾಗಿದ್ದ ಮೀನುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. 




Ads on article

Advertise in articles 1

advertising articles 2

Advertise under the article