ವೇತನ ಪರಿಷ್ಕರಣೆಗೆ ಒತ್ತಾಯಿಸಿ ಎನ್‌ಎಚ್‌ಎಂ ಶುಶ್ರೂಷಕಿಯರಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ
Sunday, July 12, 2026
ಕರ್ನಾಟಕದಾದ್ಯಂತ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಎಚ್‌ಎಂ ಶುಶ್ರೂಷಕಿಯರು, ರಾಜ್ಯ ಸರ್ಕಾರದ ಗುತ್ತಿಗೆ ಆಧಾರಿತ ಶುಶ್ರೂಷಕಿಯರಿಗಿಂತ ಗಣನೀಯವಾಗಿ ಕಡಿಮೆ ವೇತನ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ವೇತನ ಅಸಮಾನತೆಯನ್ನು ನಿವಾರಿಸುವಂತೆ ಹಾಗೂ ತಮ್ಮ ವೇತನವನ್ನು ರಾಜ್ಯ ಸರ್ಕಾರದ ಗುತ್ತಿಗೆ ಆಧಾರಿತ ಶುಶ್ರೂಷಕಿಯರ ಮಟ್ಟಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ, ಉಡುಪಿಗೆ ಭೇಟಿ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಒಂದೇ ರೀತಿಯ ಜವಾಬ್ದಾರಿ ಮತ್ತು ಸೇವೆ ಸಲ್ಲಿಸುತ್ತಿದ್ದರೂ ಎನ್‌ಎಚ್‌ಎಂ ಶುಶ್ರೂಷಕಿಯರಿಗೆ ಕಡಿಮೆ ವೇತನ ನೀಡಲಾಗುತ್ತಿರುವುದು ಅನ್ಯಾಯವಾಗಿದ್ದು, ಈ ವೇತನ ಅಸಮಾನತೆಯನ್ನು ಶೀಘ್ರವೇ ನಿವಾರಿಸಿ ಸಮಾನ ವೇತನ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ರೈ ಸೇರಿದಂತೆ ಹಲವು ಮುಖಂಡರು ಹಾಗೂ ಎನ್‌ಎಚ್‌ಎಂ ಶುಶ್ರೂಷಕಿಯರು ಉಪಸ್ಥಿತರಿದ್ದರು.