-->
 ಆಗಸ್ಟ್‌ನಲ್ಲಿ ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ: ಸಮಾಲೋಚನಾ ಸಭೆ, ಸಂಘಟನಾ ಸಮಿತಿ ರಚನೆ

ಆಗಸ್ಟ್‌ನಲ್ಲಿ ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ: ಸಮಾಲೋಚನಾ ಸಭೆ, ಸಂಘಟನಾ ಸಮಿತಿ ರಚನೆ


ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾಸ್ಯ ಮಹೋತ್ಸವದ ಅಂಗವಾಗಿ ನವ ಮುಂಬೈಯ ಪುತ್ತಿಗೆ ಮಠದ ನೂತನ ಶಾಖೆಯ ಸಭಾಂಗಣದಲ್ಲಿ ಜುಲೈ 18ರಂದು ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಚಾತುರ್ಮಾಸ್ಯ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾಗಿ ಶಿವರಾಮ ಶೆಟ್ಟಿ ಅಜೆಕಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ವಿದ್ವಾನ್ ಪ್ರಹಲ್ಲಾದ ಆಚಾರ್ಯ ನಾಗರಹಳ್ಳಿ, ಕರ್ನಾಟಕದ ನಿವೃತ್ತ ನ್ಯಾಯಾಧೀಶ ದಿನೇಶ್ ಕುಮಾರ್, ಮುಂಬೈ ಗೋಕುಲದ ಅಧ್ಯಕ್ಷ ಡಾ. ಸುರೇಶ್ ರಾವ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಎನ್.ಆರ್. ರಾವ್ ಅವರನ್ನು ನೇಮಕ ಮಾಡಲಾಯಿತು.


ಉಪಾಧ್ಯಕ್ಷರಾಗಿ ಬಿ.ಆರ್. ಶೆಟ್ಟಿ, ಅಣ್ಣಿ ಶೆಟ್ಟಿ (ಘಣ್ಸೋಲಿ), ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಭೋಜಶೆಟ್ಟಿ, ಸುರೇಶ್ ಕಾಂಚನ್, ಹರೀಶ್ ಅಮೀನ್ ಹಾಗೂ ಸೂರ್ಯಕಾಂತ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಗೋಪಾಲ ಶೆಟ್ಟಿ (ಕಳತ್ತೂರು), ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ದಿನೇಶ್ ಕುಲಾಲ್, ಜಂಟಿ ಕಾರ್ಯದರ್ಶಿಗಳಾಗಿ ವಿದ್ವಾನ್ ರಾಘವೇಂದ್ರ ಜಮದಗ್ನಿ ಹಾಗೂ ವಿದ್ವಾನ್ ಗುರುಪ್ರಸಾದ್ (ಘಣ್ಸೋಲಿ) ಅವರನ್ನು ನೇಮಕ ಮಾಡಲಾಯಿತು.

ಖಜಾಂಜಿಯಾಗಿ ಸಂತೋಷ್ ಸಿ. ಶೆಟ್ಟಿ, ಸಹ ಖಜಾಂಜಿಯಾಗಿ ಗುರುಪ್ರಸಾದ್ (ಚೆಂಬೂರು) ಹಾಗೂ ಪ್ರಧಾನ ಸಂಚಾಲಕರಾಗಿ ಸುಧೀರ್ ಆರ್.ಎಲ್. ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಬೆಂಗಳೂರು ಗೋವರ್ಧನ ಕ್ಷೇತ್ರದ ಮೇಲ್ವಿಚಾರಕರಾದ ಎ.ಬಿ. ಕುಂಜಾರ್ ನಿರೂಪಿಸಿದರು.

ಸಭೆಯಲ್ಲಿ ಚಾತುರ್ಮಾಸ್ಯ ಮಹೋತ್ಸವದ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಆಗಸ್ಟ್ 10ರಂದು ಶ್ರೀಪಾದರ ನವ ಮುಂಬೈ ಪುರಪ್ರವೇಶ, ಆಗಸ್ಟ್ 12ರಂದು ಚಾತುರ್ಮಾಸ್ಯ ವ್ರತಾರಂಭ ಹಾಗೂ ಆಗಸ್ಟ್ 15ರಂದು ನವ ಮುಂಬೈಯ ಪುತ್ತಿಗೆ ಮಠದ ನೂತನ ಶಾಖೆಯ ಲೋಕಾರ್ಪಣೆ ನೆರವೇರಲಿದೆ ಎಂದು ತಿಳಿಸಲಾಯಿತು.

ಚಾತುರ್ಮಾಸ್ಯ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ವೈಭವಯುತವಾಗಿ ನಡೆಸುವ ಉದ್ದೇಶದಿಂದ ವಿವಿಧ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. ಸಭೆಯಲ್ಲಿ ಮಠದ ಭಕ್ತರು  ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article