ನ.14, 15ರಂದು ನಡೆಯಲಿರುವ 9ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ ಕರಪತ್ರ ಬಿಡುಗಡೆ
Monday, August 17, 2026
ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ (ರಿ.) ಸಂಸ್ಥೆಯ ವತಿಯಿಂದ ನವೆಂಬರ್ 14 ಮತ್ತು 15ರಂದು ನಡೆಯಲಿರುವ 9ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದ ಕರಪತ್ರವನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಕರಾಟೆ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರಾದ ಕ್ಯೋಶಿ ರವಿ ಕುಮಾರ್ ಉದ್ಯಾವರ, ಉಪಾಧ್ಯಕ್ಷರಾದ ರೆನ್ಶಿ ಸಂತೋಷ್ ಸುವರ್ಣ ಬೊಲ್ಜೆ, ಹಿರಿಯ ಶಿಕ್ಷಕರಾದ ಶಿಹಾನ್ ಉಮೇಶ್ ಕರ್ಕೇರ, ಶಿಹಾನ್ ಸಚಿನ್ ಮಂಗಳೂರು, ರೆನ್ಶಿ ಸೋಮನಾಥ ಸುವರ್ಣ ಮಟ್ಟು, ಶಿಹಾನ್ ಸೀತಾರಾಮ ಪೂಜಾರಿ, ಜಯ ಬಾಲರಾಜ್, ಅಮೃತ ಸದಾನಂದ, ನಿಖಿಲ್ ಬಂಗೇರ, ಅಭಿಷೇಕ್ ಹೆಗ್ಡೆ, ಯತಿನ್ ಪೂಜಾರಿ, ಶ್ರುತಿಕ್, ಉದ್ಯಮಿಗಳಾದ ಭಾಸ್ಕರ್, ಶ್ರೀಮಠದ ರಾಮಮೂರ್ತಿ ಹಾಗೂ ಪಂದ್ಯಕೂಟದ ಆಯೋಜಕರಾದ ಶಿಹಾನ್ ಹರ್ಷ ಭಾಗವತ್ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಈ ಕರಾಟೆ ಸ್ಪರ್ಧಾಕೂಟದಲ್ಲಿ ವಿವಿಧ ರಾಜ್ಯಗಳಿಂದ ಕರಾಟೆ ಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸ್ಪರ್ಧಾಕೂಟವನ್ನು ಯಶಸ್ವಿಗೊಳಿಸಲು ಸಂಸ್ಥೆಯ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ.