-->
 ಜೆಸಿಐ ಇಂಡಿಯಾ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ

ಜೆಸಿಐ ಇಂಡಿಯಾ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ


ಜೆಸಿಐ ಭಾರತದ ವಲಯ ತರಬೇತುದಾರರಾಗಿ ಜೆಸಿಐ ಪಡುಬಿದ್ರಿಯ ಸದಸ್ಯೆ ಮನು ಶೆಟ್ಟಿ ಇನ್ನಾರವರು ಆಯ್ಕೆಯಾಗಿದ್ದಾರೆ.

ಕಾಪುವಿನಲ್ಲಿ ನಡೆದ ಜೆಸಿಐ ಭಾರತದ ವಲಯ ತರಬೇತುದಾರರ ಮೂರು ದಿನಗಳ ಕಾರ್ಯಾಗಾರದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೊದಲಾದ 7 ಜಿಲ್ಲೆಗಳನ್ನೊಳಗೊಂಡ 3 ವಲಯಗಳ ಸುಮಾರು 35 ಜೇಸಿ ಸ್ಪರ್ಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮನು ಶೆಟ್ಟಿ ಅವರನ್ನು ತರಬೇತುದಾರರನ್ನಾಗಿ ಆಯ್ಕೆ ಮಾಡಲಾಯಿತು.

ಜೆಸಿಐ ಭಾರತದ ವಲಯ 15ರ ಪೂರ್ವ ವಲಯಾದ್ಯಕ್ಷ ಇನ್ನಾ ಉದಯ ಕುಮಾರ್ ಶೆಟ್ಟಿ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಶ್ಮಾ ಉದಯ ಕುಮಾರ್ ಶೆಟ್ಟಿಯವರ ಪುತ್ರಿಯಾಗಿರುವ ಮನು ಶೆಟ್ಟಿಯವರು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದು, ವಲಯ 15ರ ಅತಿ ಕಿರಿಯ ವಯಸ್ಸಿನ ತರಬೇತುದಾರರೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ads on article

Advertise in articles 1

advertising articles 2

Advertise under the article