ಕಲ್ಯಾಣಪುರ ಲಯನ್ಸ್ ಪದಗ್ರಹಣ ಸಮಾರಂಭ
Sunday, August 09, 2026
ಕಲ್ಯಾಣಪುರ ಲಯನ್ಸ್ ಸಂಸ್ಥೆಯ ಪದಗ್ರಹಣ ಸಮಾರಂಭವು ಕಲ್ಯಾಣಪುರ ಟ್ರೈ ಸೆಂಟೇನರಿ ಸಭಾಂಗಣ ಇಲ್ಲಿ ನಡೆಯಿತು.
317ಸಿ Iಇದರ ಪ್ರಥಮ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ನೂತನ ಅಧ್ಯಕ್ಷರಾದ ವಿಲ್ಸನ್ ಫೆರ್ನಾಂಡಿಸ್, ಕಾರ್ಯದರ್ಶಿ ನಂದಕಿಶೋರ್ ಕೆಮ್ಮಣ್ಣು ಹಾಗೂ ಸುರೇಂದ್ರ ಕೆ. ಅಮೀನ್ ಹಾಗೂ
ಕ್ಲಬ್ಬಿನ ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಮಹೇಶ್ ಹೊಡೆ, ಅನಿಲ್ ಮೆಂಡೋನ್ಸ ಮೂಡಬಿದ್ರೆ, ರಂಗ ಕಲಾವಿದ, ನಿರೂಪಕ ಪ್ರವೀಣ್ ಚಂದ್ರ ತೋನ್ಸೆ, ಪ್ಲಾನೆಟ್ ಮಾರ್ಸ್ ಫೌಂಡೇಶನ್ ಹಾಗೂ ಮಟ್ಪಾಡಿ ವಿಜಯ ಬಾಲನಿಕೇತನ ಬಾಲಾಶ್ರಮ ಇವರಿಗೆ ಧನಸಹಾಯವನ್ನು ನೀಡಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಯುವ ಅಮರವೀರ ಗೀತ ಗಾಯನ ಸ್ಪರ್ಧೆಯ ಕರಪತ್ರ ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನವಾಗಿ ಆರಂಭಗೊಂಡ ಲಯನ್ಸ್ ಕ್ಲಬ್ ಕೆಮ್ಮಣ್ಣು ಇದರ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷರಾದ ಕರುಣಾಕರ ಬಂಗೇರ, ಪ್ರಾಂತೀಯ ಕಾರ್ಯದರ್ಶಿಯಾದ ಸುಧಾಕರ್ ಪೂಜಾರಿ, ವಲಯ ಅಧ್ಯಕ್ಷೆ ಜಯಶ್ರೀ ಪ್ರಶಾಂತ್, ಮಟ್ಟಾರು ರತ್ನಾಕರ ಹೆಗ್ಡೆ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.
ರಿಚರ್ಡ್ ಕ್ರಾಸ್ಟೋ ಸ್ವಾಗತಿಸಿ, ನಂದ ಕಿಶೋರ್ ವಂದಸಿದರು. ರಾಮದಾಸ್ ಶೆಟ್ಟಿಗಾರ್ ಹಾಗೂ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
