ಕಾರಿನ ಮೇಲೆ ಮರ, ವಿದ್ಯುತ್ ಕಂಬ ಉರುಳಿ ವ್ಯಕ್ತಿ ಸ್ಥಳದಲ್ಲೇ ಸಾವು
Friday, August 07, 2026
ಚಲಿಸುತ್ತಿದ್ದ ಕಾರಿನ ಮೇಲೆ ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಹೆಬ್ರಿ - ಬ್ರಹ್ಮಾವರ ರಸ್ತೆಯ ಹುತ್ತುರ್ಕೆ ಬಳಿ ಇಂದು ಸಂಜೆ ನಡೆದಿದೆ.
ರೆನಾಲ್ಟ್ ಕಂಪೆನಿಯ KA20MG 7004 ನಂಬರಿನ ಕಾರು ಇದಾಗಿದ್ದು, ಕಾರು ಚಲಾಯಿಸುತ್ತಿದ್ದ ಕೃಷಿಕರಾದ ಸದಾನಂದ ನಾಯಕ್ ಸ್ಥಳದಲ್ಲೇ ಮೃತ ಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮರ ಉರುಳಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕ್ರೇನ್ ಬಳಸಿ ಮರ ಹಾಗೂ ವಿದ್ಯುತ್ ಕಂಬ ತೆರವುಗೊಳಿಸಲಾಯಿತು.
ಹೆಬ್ರಿ ಪೊಲೀಸರು ಸ್ಥಳದಲ್ಲಿದ್ದು, ಕ್ರಮ ಕೈಗೊಂಡಿದ್ದಾರೆ.