-->
ಅ. 1ರಂದು ರಾಜ್ಯ ಕಿರಿಯರ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾ ತಂಡದ ಆಯ್ಕೆ

ಅ. 1ರಂದು ರಾಜ್ಯ ಕಿರಿಯರ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾ ತಂಡದ ಆಯ್ಕೆ


ಅಕ್ಟೋಬರ್ 5ರಿಂದ 7ರ ವರೆಗೆ ತುಮಕೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಕಿರಿಯರ ಕ್ರೀಡಾಕೂಟಕ್ಕೆ, ಉಡುಪಿ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆಯು ಅ. 1ರಂದು ಅಪರಾಹ್ನ 2.30ಕ್ಕೆ ಅಜ್ಜರಕಾಡಿನ ಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ನಡೆಯಲಿದೆ.

ಆಯ್ಕೆ ಬಯಸುವ ಕ್ರೀಡಾಪಟುಗಳು ಜನ್ಮ ದಿನಾಂಕ ಪ್ರತಿ ಮತ್ತು A.F.I.U.I.D. ನೋಂದಣಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದ್ದು, ಸಮಯಕ್ಕೆ ಸರಿಯಾಗಿ ಹಾಜರಿರಲು ಕೋರಲಾಗಿದೆ. 

ಕ್ರೀಡಾಕೂಟವು 14ರ ವಯೋಮಿತಿ, 16ರ ವಯೋಮಿತಿ, 18ರ ವಯೋಮಿತಿ ಮತ್ತು 20ರ ವಯೋಮಿತಿಯಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಕ್ರೀಡಾಪಟುಗಳು ದಿನೇಶ್ ಕುಮಾರ್ ಅವರನ್ನು +91 98861 18207 ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article