-->
 ಅ.11ರಿಂದ 19ರವರೆಗೆ ಇಂದ್ರಾಳಿ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ

ಅ.11ರಿಂದ 19ರವರೆಗೆ ಇಂದ್ರಾಳಿ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ


ಉಡುಪಿಯ ಇಂದ್ರಾಳಿ–ವಿಬುಧಪ್ರಿಯ ನಗರದ ಕಂಚಿಗಾರಗುಳಿ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ತಂಡ ಭಜನಾ ಸ್ಪರ್ಧೆ ‘ಹಾಡಿ ಭಜಿಸಿರೋ’ ಆಯೋಜಿಸಲಾಗಿದೆ.

ಅ.11ರಿಂದ 19ರವರೆಗೆ ಪ್ರತಿದಿನ ಸಂಜೆ 4.30ರಿಂದ ರಾತ್ರಿ 8 ಗಂಟೆಯವರೆಗೆ ಸ್ಪರ್ಧೆ ನಡೆಯಲಿದ್ದು, ಅ.20ರಂದು ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಅ.11ರಿಂದ 17ರವರೆಗೆ ಪ್ರಾಥಮಿಕ ಸುತ್ತು ನಡೆಯಲಿದ್ದು, ಅತ್ಯುತ್ತಮ ಐದು ತಂಡಗಳು ಅ.18 ಮತ್ತು 19ರಂದು ನಡೆಯುವ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲಿವೆ.

ಪ್ರಾಥಮಿಕ ಸುತ್ತಿನಲ್ಲಿ ಪ್ರತಿ ತಂಡಕ್ಕೆ 45 ನಿಮಿಷ ಹಾಗೂ ಅಂತಿಮ ಸುತ್ತಿನಲ್ಲಿ ಒಂದು ಗಂಟೆ ಕಾಲಾವಕಾಶ ನೀಡಲಾಗುವುದು. ಪ್ರತಿ ತಂಡದಲ್ಲಿ ಹಿಮ್ಮೇಳ ವಾದಕರ ಸಹಿತ ಕನಿಷ್ಠ 5 ಹಾಗೂ ಗರಿಷ್ಠ 12 ಮಂದಿ ಸದಸ್ಯರು ಇರಬಹುದು. ಅಗತ್ಯವಿರುವ ಸಂಗೀತ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಕನಿಷ್ಠ ಮೂವರು ಸದಸ್ಯರು ಮುಖ್ಯ ಭೂಮಿಕೆಯಲ್ಲಿ ಹಾಡಬೇಕು. ಕುಣಿತ ಭಜನೆಗೆ ಅವಕಾಶವಿರುವುದಿಲ್ಲ.

ಭಕ್ತಿ, ಭಾವ, ರಾಗ, ತಾಳ, ಲಯ, ಪಕ್ಕವಾದ್ಯ, ಹೊಂದಾಣಿಕೆ ಹಾಗೂ ಸಮವಸ್ತ್ರದ ಆಧಾರದ ಮೇಲೆ ತೀರ್ಪು ನೀಡಲಾಗುವುದು. ದಾಸರ ಪದಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಕನಿಷ್ಠ 30 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಉಪಸ್ಥಿತರಿರಬೇಕು.

ಬಹುಮಾನಗಳು: ಪ್ರಥಮ ರೂ.9,999, ದ್ವಿತೀಯ ರೂ.7,777, ತೃತೀಯ ರೂ.5,555 ಹಾಗೂ ಎರಡು ಸಮಾಧಾನಕರ ಬಹುಮಾನವಾಗಿ ತಲಾ ರೂ.2,222 ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸದಸ್ಯರಿಗೆ ಪ್ರಮಾಣಪತ್ರ ಹಾಗೂ ತಂಡಕ್ಕೆ ಸ್ಮರಣಿಕೆ ನೀಡಲಾಗುವುದು.

ಸ್ಪರ್ಧೆಗೆ ನೋಂದಾಯಿಸಲು ಅ.8 ಕೊನೆಯ ದಿನವಾಗಿದ್ದು, ಆಸಕ್ತ ತಂಡಗಳು 6363237824 ಅಥವಾ 9980312692 ಸಂಖ್ಯೆಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.

Ads on article

Advertise in articles 1

advertising articles 2

Advertise under the article