-->
 ಬಾರಕೂರಿನಲ್ಲಿ ರಂಗೋಲಿಯಲ್ಲಿ ಅರಳಿದ ಹಿರಿಯ ನಟ ಅನಂತ್ ನಾಗ್ ಭಾವಚಿತ್ರ

ಬಾರಕೂರಿನಲ್ಲಿ ರಂಗೋಲಿಯಲ್ಲಿ ಅರಳಿದ ಹಿರಿಯ ನಟ ಅನಂತ್ ನಾಗ್ ಭಾವಚಿತ್ರ


ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಇಂದು ಗುಜರಾತಿನಲ್ಲಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ, ಅವರ ಕಲಾ ಬದುಕಿಗೆ ವಿಶೇಷ ಗೌರವ ಸಲ್ಲಿಸುವ ರೀತಿಯಲ್ಲಿ ಬಾರಕೂರಿನ ರಂಗೋಲಿ ಕಲಾವಿದೆ ವಿಶಾಲ ಮಹೇಶ್ ಪೂಜಾರಿ ಅವರು ಅನಂತ್ ನಾಗ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸಿದ್ದಾರೆ.


ಸುಮಾರು ಮೂರುವರೆ ಅಡಿ ಉದ್ದ ಹಾಗೂ ಮೂರು ಅಡಿ ಅಗಲದ ರಂಗೋಲಿಯಲ್ಲಿ ಅನಂತ್ ನಾಗ್ ಅವರ ಭಾವಚಿತ್ರವನ್ನು ಅತ್ಯಂತ ಕಲಾತ್ಮಕವಾಗಿ ರಚಿಸಲಾಗಿದ್ದು, ಈ ಚಿತ್ರ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ವಿಶಾಲ ಮಹೇಶ್ ಪೂಜಾರಿ ಅವರು ಈ ಕಲಾಕೃತಿಯನ್ನು ಪೂರ್ಣಗೊಳಿಸಲು ಸುಮಾರು ಏಳು ಗಂಟೆಗಳ ಕಾಲ ಸತತವಾಗಿ ಶ್ರಮಿಸಿದ್ದಾರೆ. ಸೂಕ್ಷ್ಮವಾದ ರೇಖೆಗಳು, ಬಣ್ಣಗಳ ಸಂಯೋಜನೆ ಹಾಗೂ ಅನಂತ್ ನಾಗ್ ಅವರ ಮುಖಭಾವವನ್ನು ರಂಗೋಲಿಯಲ್ಲಿ ಮೂಡಿಸುವ ಮೂಲಕ ಹಿರಿಯ ನಟನಿಗೆ ವಿಶಿಷ್ಟ ಗೌರವ ಅರ್ಪಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅವರು ನೀಡಿರುವ ದೀರ್ಘಕಾಲದ ಕೊಡುಗೆಯನ್ನು ಸ್ಮರಿಸುವ ಈ ವಿಶೇಷ ಕಲಾಕೃತಿ, ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಪ್ರಶಸ್ತಿ ಸ್ವೀಕಾರದ ಸಂಭ್ರಮದೊಂದಿಗೆ ರಂಗೋಲಿಯಲ್ಲಿ ಮೂಡಿಬಂದಿರುವ ಅನಂತ್ ನಾಗ್ ಅವರ ಭಾವಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುವಂತಾಗಿದೆ.

Ads on article

Advertise in articles 1

advertising articles 2

Advertise under the article