-->
  ಹೂಡೆ ರಸ್ತೆ ಬದಿಯಲ್ಲಿ ಪತ್ತೆಯಾದ ನವಜಾತ ಶಿಶುವಿನ ಕಳೇಬರ ದಫನ

ಹೂಡೆ ರಸ್ತೆ ಬದಿಯಲ್ಲಿ ಪತ್ತೆಯಾದ ನವಜಾತ ಶಿಶುವಿನ ಕಳೇಬರ ದಫನ


ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಪ್ರದೇಶದಲ್ಲಿ ರಸ್ತೆ ಬದಿಯ ಕಾಲ್ನಡಿಗೆ ದಾರಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿನ ಕಳೇಬರದ ದಫನ ಕಾರ್ಯವನ್ನು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಯಿತು.

ಕೆಲವೇ ಗಂಟೆಗಳ ಹಿಂದೆ ಜನಿಸಿದಂತೆ ಕಂಡುಬಂದಿದ್ದ ನವಜಾತ ಶಿಶು ಹೂಡೆಯ ಮನೆಯೊಂದಕ್ಕೆ ತೆರಳುವ ಕಾಲುದಾರಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಮಗುವನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿತ್ತು. ಘಟನೆ ಸಂಬಂಧ ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದ್ದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿದ್ದ ಶಿಶುವಿನ ಕಳೇಬರವನ್ನು ದಫನ ಮಾಡಲಾಯಿತು.

ಠಾಣಾಧಿಕಾರಿಯವರ ಆದೇಶದ ಮೇರೆಗೆ ಆರಕ್ಷಕ ಗುರುರಾಜ್ ಹಾಗೂ ನಗರಸಭೆ ಹೆಲ್ತ್ ಇನ್ಸ್‌ಪೆಕ್ಟರ್ ಸತೀಶ್ ಅವರ ಸಮ್ಮುಖದಲ್ಲಿ ದಫನ ಕಾರ್ಯ ನಡೆಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು  ಉಪಸ್ಥಿತರಿದ್ದು, ದಫನ ಕಾರ್ಯದಲ್ಲಿ ಸಹಕರಿಸಿದರು.

Ads on article

Advertise in articles 1

advertising articles 2

Advertise under the article