-->
ಕಾಪು‌ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ

ಕಾಪು‌ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ


ಉಡುಪಿ‌ ಜಿಲ್ಲಾಡಳಿತ ಕಾಪು ಪುರ ಸಭೆ ,ಸ್ವಚ್ಚಂ ವಾಟರ್ ಅಡ್ವೆಂಚರ್, ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಬೀಚ್ ಸ್ವಚ್ಚತಾ ಅಭಿಯಾನ ವನ್ನು ಕಾಪು‌ ಬೀಚ್ ನಲ್ಲಿ‌ ಹಮ್ಮಿಕೊಳ್ಳಲಾಯಿತು.


ರವಿವಾರ ಮುಂಜಾನೆ ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,ಕಾಪು ಬೀಚ್ ಸುತ್ತಮುತ್ತ ಇದ್ದ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಾಪು ಪುರಸಭೆಗೆ ಹಸ್ತಾಂತರಿಸಲಾಯಿತು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಕಾಪು ಪುರಸಭೆ ಮುಖ್ಯಧಿಕಾರಿ


ನೀಲಕಂಠ ಮೇಸ್ತ ,ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸಮುದಾಯ ಸಂಘಟನಾಧಿಕಾರಿಗಳಾದ ರತ್ನಾಕರ ಶೆಟ್ಟಿ , ವಿದ್ಯಾಲತಾ, ನೂರುದ್ದಿನ್, ಉಮೇಶ್ ಕರ್ಕೇರ, ವಾಣಿ ಆಳ್ವಾ , ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷರು ಸದಸ್ಯರುಗಳು, ಹಿರಿಯ ಆರೋಗ್ಯ ನಿರೀಕ್ಷಕರಾದ ಅನ್ವರ್ ಅಲಿ, ಸ್ವಚ್ಛಂ ಗ್ರೂಪ್ ಮಾಲಕರಾದ ತಾರಾನಾಥ್ ಮತ್ತು ಗುರುಪ್ರಸಾದ್ ,ದನ್ಪಾಲ್ ಕೋಟ್ಯಾನ್, ಚಂದ್ರಶೇಖರ್ ಮೆಂಡನ್, ನಿತಿನ್, ಅಭಿಲಾಶ್ ಭಟ್ ಮತ್ತು ವಿವಿಧ ಸಂಘ ಸಂಸ್ಥೆಗಳು‌ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article