-->
ವಿಶ್ವ ದಾಖಲೆ ಸೇರಿದ ಪರ್ಕಳದ ಆರ್. ಮನೋಹರ್ ಆವಿಷ್ಕರಿಸಿದ ದ್ವಿನೇತ್ರ ದೂರದರ್ಶಕ

ವಿಶ್ವ ದಾಖಲೆ ಸೇರಿದ ಪರ್ಕಳದ ಆರ್. ಮನೋಹರ್ ಆವಿಷ್ಕರಿಸಿದ ದ್ವಿನೇತ್ರ ದೂರದರ್ಶಕ


ಮಣಿಪಾಲದ ಪರ್ಕಳ ನಿವಾಸಿ ಹಾಗೂ ಎಂಐಟಿಯ ನಿವೃತ್ತ ಉದ್ಯೋಗಿ ಆರ್. ಮನೋಹರ್ ಅವರು ಆವಿಷ್ಕರಿಸಿದ ಅತ್ಯಂತ ಕಡಿಮೆ ವೆಚ್ಚದ 200X ಸಾಮರ್ಥ್ಯದ ಭೂವೀಕ್ಷಣಾ ದ್ವಿನೇತ್ರ ದೂರದರ್ಶಕವು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.


ಮನೋಹರ್ ಅವರು ಭೂವಸ್ತುಗಳ ವೀಕ್ಷಣೆಯ ಜೊತೆಗೆ ಆಕಾಶಕಾಯಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಈ ವಿಶೇಷ ದೂರದರ್ಶಕವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವತಿಯಿಂದ ಶ್ರೇಷ್ಠತೆಯ ಪ್ರಮಾಣಪತ್ರ ನೀಡಲಾಗಿದೆ.


2026ರ ಆಗಸ್ಟ್ 23ರಂದು ಮನೋಹರ್ ಅವರು ತಾವು ಆವಿಷ್ಕರಿಸಿದ 200X ಸಾಮರ್ಥ್ಯದ ಭೂವೀಕ್ಷಣಾ ದ್ವಿನೇತ್ರ ದೂರದರ್ಶಕವನ್ನು ಪ್ರದರ್ಶಿಸಿದ್ದರು. ಇದರ ತಯಾರಿಕಾ ವೆಚ್ಚ ಕೇವಲ 900 ಅಮೆರಿಕನ್ ಡಾಲರ್ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಅತ್ಯಂತ ಕಡಿಮೆ ವೆಚ್ಚದ 200X ಸಾಮರ್ಥ್ಯದ ಭೂವೀಕ್ಷಣಾ ದ್ವಿನೇತ್ರ ದೂರದರ್ಶಕ” ಎಂಬ ವಿಶ್ವ ದಾಖಲೆಯನ್ನು ಪರ್ಕಳದ ಆರ್. ಮನೋಹರ್ ಅವರು ಸಾಧಿಸಿರುವುದಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರದಲ್ಲಿ ದಾಖಲಿಸಲಾಗಿದೆ.ತಮ್ಮ ಆವಿಷ್ಕಾರಕ್ಕೆ ವಿಶ್ವ ಮಾನ್ಯತೆ ದೊರೆತಿರುವುದಕ್ಕೆ ಮನೋಹರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article