IMA ಉಡುಪಿ–ಕರಾವಳಿ ಘಟಕದ ಅಧ್ಯಕ್ಷರಾಗಿ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಆಯ್ಕೆ
ಭಾರತೀಯ ವೈದ್ಯಕೀಯ ಸಂಘ (IMA) ಉಡುಪಿ–ಕರಾವಳಿ ಘಟಕದ ನೂತನ ಅಧ್ಯಕ್ಷರಾಗಿ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ಡಾ. ವಿಜಯ ವೈ.ಬಿ., ಖಜಾಂಚಿಯಾಗಿ ಡಾ. ಕಿರಣ್, ಉಪಾಧ್ಯಕ್ಷರಾಗಿ ಡಾ. ರಾಜೇಶ್ ಭಕ್ತ, ಜಂಟಿ ಕಾರ್ಯದರ್ಶಿಯಾಗಿ ಡಾ. ಕೇಶವ ನಾಯಕ್ ಹಾಗೂ ಜಂಟಿ ಖಜಾಂಚಿಯಾಗಿ ಡಾ. ಜ್ಯೋತ್ಸ್ನಾ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಪುರುಷೋತ್ತಮ ಆಚಾರ್ಯ, ಡಾ. ಅರುಣ್ ವರ್ನೇಕರ್, ಡಾ. ಅಭಿನಯ್, ಡಾ. ಸುಹಾಸ್ ಜಿ.ಸಿ., ಡಾ. ನರೇಂದ್ರ ಕುಮಾರ್, ಡಾ. ಅರ್ಚನಾ ಭಕ್ತ, ಡಾ. ಅನೂಪ್ ಶೆಟ್ಟಿ, ಡಾ. ಶಂಕರ ಪ್ರಸಾದ್, ಡಾ. ಭಾಸ್ಕರ್, ಡಾ. ರಂಜಿತಾ ಶೆಟ್ಟಿ, ಡಾ. ಅಶ್ವಿನಿ ಕುಮಾರ್, ಡಾ. ಶರತ್ ಚಂದ್ರ ರಾವ್, ಡಾ. ಸುರೇಶ್ ಶೆಣೈ ಹಾಗೂ ಡಾ. ರಿಥಿಕಾ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ರಾಜ್ಯ ಮಂಡಳಿ ಸದಸ್ಯರಾಗಿ ಡಾ. ವಾಸುದೇವ್, ಡಾ. ಉಮೇಶ್ ಪ್ರಭು, ಡಾ. ವೈ.ಎಸ್. ರಾವ್, ಡಾ. ಮುರಳೀಧರ್ ಪಾಟೀಲ್, ಡಾ. ಗೀತಾ ಪುತ್ತ್ರನ್ ಹಾಗೂ ಡಾ. ರಾಜಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಕೇಂದ್ರ ಮಂಡಳಿ ಸದಸ್ಯರಾಗಿ ಡಾ. ಸುಧೇಶ್ ಕುಮಾರ್ ಯು., ಡಾ. ರಾಜಗೋಪಾಲ್ ಭಂಡಾರಿ ಹಾಗೂ ಡಾ. ಸತೀಶ್ ಕಾಮತ್, ಪರ್ಯಾಯ ಕೇಂದ್ರ ಮಂಡಳಿ ಸದಸ್ಯರಾಗಿ ಡಾ. ಸುನೀಲ್ ಮುಂಡ್ಕೂರ್, ಡಾ. ಉಮೇಶ್ ನಾಯಕ್ ಹಾಗೂ ಡಾ. ವಿಜಯ್ ಕುಮಾರ್ ಶೆಟ್ ಆಯ್ಕೆಯಾಗಿದ್ದಾರೆ.
ಪದನಿಮಿತ್ತ ಸದಸ್ಯರಾಗಿ ಡಾ. ಅಶೋಕ್ ಕುಮಾರ್ ಹಾಗೂ ಡಾ. ಮಾನಸ್ ಇ.ಆರ್. ಮತ್ತು ಆಂತರಿಕ ಲೆಕ್ಕಪರಿಶೋಧಕರಾಗಿ ಡಾ. ಸನತ್ ರಾವ್ ನೇಮಕಗೊಂಡಿದ್ದಾರೆ.