ಪಿತ್ರೋಡಿ ಸದಿಯ ಸಾವುಕಾರ್ ಪ್ರೈಮರಿ ಶಾಲೆಯ ನಿವೃತ್ತ ಶಿಕ್ಷಕಿ ದೇವಕಿ ಟೀಚರ್ ನಿಧನ
Tuesday, September 08, 2026
ಉಡುಪಿ ಜಿಲ್ಲೆಯ ಪಿತ್ರೋಡಿಯ ಸದಿಯ ಸಾವುಕಾರ್ ಪ್ರೈಮರಿ ಶಾಲೆಯಲ್ಲಿ ಮಕ್ಕಳ ಪ್ರೀತಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಊರಿನ ಜನರ ಅಪಾರ ಗೌರವಕ್ಕೆ ಪಾತ್ರರಾಗಿದ್ದ ಕುತ್ಪಾಡಿ ಕಾನಂಗಿ ದೇವಸ್ಥಾನದ ಸಮೀಪದ ‘ದೇವಿಕೃಪಾ’ ನಿವಾಸಿ ದೇವಕಿ (83) ಅವರು ಸೋಮವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಸಾಮಾಜಿಕ ಮುಂದಾಳು ದಿ. ಅಂಗರ ತಿಂಗಳಾಯರ ಧರ್ಮಪತ್ನಿ. ತಮ್ಮ ಸರಳ, ಸೌಮ್ಯ ಸ್ವಭಾವ ಹಾಗೂ ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ ದೇವಕಿ ಟೀಚರ್ ಜನಾನುರಾಗಿಯಾಗಿದ್ದರು.
ಮೃತರು ಪುತ್ರರಾದ ನಿಡಂಬೂರು ಯುವಕ ಮಂಡಲದ ನಿಕಟಪೂರ್ವ ಗೌರವಾಧ್ಯಕ್ಷ ದೀಪಕ್ ರಾಜ್, ಉದ್ಯಮಿ ದಿಲೀಪ್ ರಾಜ್, ಪುತ್ರಿ, ಮೊಮ್ಮಕ್ಕಳು, ಬಂಧುಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಅವರ ಅಂತಿಮ ಕ್ರಿಯಾವಿಧಿಯು ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ ಕುತ್ಪಾಡಿಯಲ್ಲಿರುವ ಅವರ ನಿವಾಸದಲ್ಲಿ ನಡೆಯಲಿದ್ದು, ಬಳಿಕ ಉದ್ಯಾವರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.