-->
ಕೋಡಿ ಕಡಲ ತೀರಕ್ಕೆ ತೇಲಿ ಬಂದ ಬೂತಾಯಿ ಮೀನುಗಳು: ಮುಗಿಬಿದ್ದ ಜನ !

ಕೋಡಿ ಕಡಲ ತೀರಕ್ಕೆ ತೇಲಿ ಬಂದ ಬೂತಾಯಿ ಮೀನುಗಳು: ಮುಗಿಬಿದ್ದ ಜನ !


ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಕಡಲ ತೀರದಲ್ಲಿ ಶನಿವಾರ ಬೃಹತ್ ಪ್ರಮಾಣದಲ್ಲಿ ಬೂತಾಯಿ (ಸಾರ್ಡಿನ್) ಮೀನುಗಳು ಅಲೆಗಳೊಂದಿಗೆ ದಡಕ್ಕೆ ತೇಲಿ ಬಂದಿದ್ದು, ಕಡಲ ತೀರದಲ್ಲಿ ಮೀನಿನ ರಾಶಿಯೇ ಕಂಡುಬಂತು.

ಕೋಡಿ ಕಡಲ ತೀರದ ನೂರಾರು ಮೀಟರ್ ಉದ್ದಕ್ಕೂ ಬೂತಾಯಿ ಮೀನುಗಳು ದಡದಲ್ಲಿ ಬಿದ್ದಿದ್ದವು. ಈ ಅಪರೂಪದ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ಕಡಲ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉಚಿತವಾಗಿ ಮೀನುಗಳನ್ನು ಹೆಕ್ಕಿಕೊಂಡು ಹೋಗಲು ಮುಗಿಬಿದ್ದರು.

ಚೀಲ, ಬುಟ್ಟಿ ಸೇರಿದಂತೆ ಸಿಕ್ಕ ಸಿಕ್ಕ ಪಾತ್ರೆಗಳಲ್ಲಿ ಜನರು ಬೂತಾಯಿ ಮೀನುಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು. ಕರಾವಳಿ ಭಾಗದಲ್ಲಿ ಇಂತಹ ಘಟನೆಗಳು ಅಪರೂಪವೇನಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಕುಂದಾಪುರದ ಮರವಂತೆ, ಹೆಜಮಾಡಿ ಹಾಗೂ ಮಂಗಳೂರಿನ ಉಳ್ಳಾಲ ಕಡಲ ತೀರಗಳಲ್ಲಿಯೂ ಇದೇ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು.

ಸಮುದ್ರದ ತಳಭಾಗದಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದು ಅಥವಾ ನೀರಿನ ಉಷ್ಣಾಂಶದಲ್ಲಿ ದಿಢೀರ್ ಬದಲಾವಣೆ ಸಂಭವಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೀನುಗಳ ಹಿಂಡು ದಿಕ್ಕು ತಪ್ಪಿ ದಡದತ್ತ ಬರುವ ಸಾಧ್ಯತೆ ಇದೆ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. 



Ads on article

Advertise in articles 1

advertising articles 2

Advertise under the article