-->
 ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ


ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಭಾಸ್ಕರ ಬಿ. ಕಾಮತ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಮಿಷನ್ ಕಂಪೌಂಡ್‌ ಸಮೀಪದ ಜಗನ್ನಾಥ ಸಭಾಭವನದಲ್ಲಿ ನಡೆಯಿತು.


ಸಭೆಯಲ್ಲಿ ಮಾತನಾಡಿದ ಭಾಸ್ಕರ ಬಿ. ಕಾಮತ್ ಅವರು, ಸಂಘದ ವಾರ್ಷಿಕ ವ್ಯವಹಾರವನ್ನು 100 ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅಲ್ಲದೆ, ಸಂಘದ ಕಾರ್ಯವ್ಯಾಪ್ತಿಯಲ್ಲಿ ಲಭ್ಯತೆಗನುಸಾರ ಜಮೀನು ಖರೀದಿಸಿ, ಅಭಿವೃದ್ಧಿಪಡಿಸಿ ಸದಸ್ಯರಿಗೆ ಹಂಚಿಕೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ಸಹಾಯಧನ ವಿತರಿಸಲಾಯಿತು. ಸಂಘದ ವಾರ್ಷಿಕ ವರದಿಯನ್ನು ವ್ಯವಸ್ಥಾಪಕ ಅಶೋಕ್ ಭಟ್ ಮಾರ್ಪಳ್ಳಿ ಮಂಡಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್ ಹಾಗೂ ನಿರ್ದೇಶಕರಾದ ಇಂದು ರಮಾನಂದ ಭಟ್, ಬಿ. ಜಯಕರ ಶೆಟ್ಟಿ ಇಂದ್ರಾಳಿ, ರಾಧಾಕೃಷ್ಣ ಶೆಣೈ, ಸಂಜೀವ ಕಾಂಚನ್, ವಿಶ್ವನಾಥ ಬಾಯರಿ, ದಿನೇಶ್ ಕಿಣಿ, ದಾಮೋದರ ಎಂ. ಶೆಟ್ಟಿ, ದೇವದಾಸ್ ಯು., ಸುಜಾತ ಸಿಮನ್ ಪ್ರಭು, ರಂಜನಾ ಎಸ್. ಶೆಟ್ಟಿ ಹಾಗೂ ಗೋಪಾಲ ನಾಯ್ಕ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಲ್. ಉಮಾನಾಥ್ ಧನ್ಯವಾದ ಸಲ್ಲಿಸಿದರು.

Ads on article

Advertise in articles 1

advertising articles 2

Advertise under the article