-->
 ಅ.9-11: ಉಡುಪಿಯಲ್ಲಿ ಬೃಹತ್ ಆಹಾರ ಮತ್ತು ಗೃಹ ಉತ್ಪನ್ನಗಳ ಮೇಳ

ಅ.9-11: ಉಡುಪಿಯಲ್ಲಿ ಬೃಹತ್ ಆಹಾರ ಮತ್ತು ಗೃಹ ಉತ್ಪನ್ನಗಳ ಮೇಳ


ಗುಡಿ ಕೈಗಾರಿಕೆ ಮತ್ತು ಗೃಹ ಉತ್ಪನ್ನದ ಮಾರಾಟಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಉಡುಪಿಯ ಅಜ್ಜರಕಾಡು ಮೈದಾನ ಬಳಿಯಿರುವ ಟೌನ್ ಹಾಲ್‌ನಲ್ಲಿ ಅಕ್ಟೋಬರ್ 9ರಿಂದ 11 ಆದಿತ್ಯವಾರದವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9.30ರವರೆಗೆ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮೇಳವನ್ನು ಆಯೋಜಿಸಲಾಗಿದೆ ಎಂದು ವಸುದೈವ ಕುಟುಂಬಕಂ ನ ಪೂರ್ಣಿಮಾ ಶೆಟ್ಟಿ ತಿಳಿಸಿದ್ದಾರೆ. 


ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ಈ ಮೇಳಕ್ಕೆ ಈ ಹಿಂದೆ ರಾಜ್ಯಾದ್ಯಂತ ಹಲಸು ಮತ್ತು ಸ್ವದೇಶಿ ಮೇಳಗಳ ಆಯೋಜಕರಾದ ಬೆನಕ ಇವೆಂಟ್ಸ್ ಅವರು  ಜೊತೆ ಸಹಕಾರ ನೀಡುತ್ತಿದ್ದಾರೆ. ಈ ಮೇಳದಲ್ಲಿ ಸಂಪೂರ್ಣ ನೈಸರ್ಗಿಕ ಆಹಾರ ಪದಾರ್ಥಗಳನ್ನು ಸ್ಥಳದಲ್ಲಿ ಕೂಡಲೇ ಮಾಡಿಕೊಡುತ್ತಾರೆ. ಇದಲ್ಲದೆ ಕರಾವಳಿಯ ಹೆಮ್ಮೆಯ ಭಟ್ & ಭಟ್ ಉತ್ಪನ್ನಗಳು, ಕೊಕೊಗುರು ಉತ್ಪನ್ನಗಳು, ಆರ್‌ಕೆ ಪಿಕಲ್ಸ್ ಉತ್ಪನ್ನಗಳು, ಕಲ್ಪರಸ, ಚೆನ್ನಪಟ್ಟಣ ಬೊಂಬೆ, ಇಲ್‌ಕಲ್ ಸೀರೆ, ಮಕ್ಕಳ ಮತ್ತು ಹಿರಿಯರ ಸಿದ್ಧ ಉಡುಪುಗಳು, ನಿತ್ಯ ಬಳಕೆಯ ಆಯುರ್ವೇದ ಉತ್ಪನ್ನಗಳ ನೂರಾರು ಮಳಿಗೆಗಳು ಆಗಮಿಸಲಿದ್ದು ಒಂದೇ ಸೂರಿನಲ್ಲಿ ಎಲ್ಲಾ ಉತ್ಪನ್ನಗಳ ಖರೀದಿ ಮಾಡಬಹುದು. ಪ್ರವೇಶ ಸಂಪೂರ್ಣ ಉಚಿತವಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಲಕೃಷ್ಣ ಮದ್ದೋಡಿ, ಭಾಸ್ಕರ್ ಪೂಜಾರಿ, ಗಣೇಶ್ ಶೆಟ್ಟಿ, ರಮೇಶ್ ತಿಂಗಳಾಯ, ದಶರಥ ಸಿಂಗ್  ಮೊದಲಾದವರು ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article