ಜೇಸಿಐ ಉಡುಪಿ ಶಿವಳ್ಳಿ ವತಿಯಿಂದ ಕೊರಗ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿವೇತನ, ಶಾಲಾ ಬ್ಯಾಗ್ ವಿತರಣೆ
Friday, October 02, 2026
ಜೇಸಿಐ ಉಡುಪಿ ಶಿವಳ್ಳಿ ಘಟಕದ ನೇತೃತ್ವದಲ್ಲಿ ಜೇಸಿಐ ಕಾಪು ಘಟಕ ಹಾಗೂ ಸಮಾಜಸೇವಕ ಸಂಕೇತ್ ಆಚಾರ್ಯ ಅವರ ಸಹಕಾರದೊಂದಿಗೆ ಕೊರಗ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮ ನಡೆಯಿತು.
ಅಕ್ಟೋಬರ್ 1ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಆತ್ರಾಡಿ, ಕಟಪಾಡಿ, ತೊಟ್ಟಂ, ಕೆಮ್ಮಣ್ಣು, ಪುತ್ತೂರು, ಇಂದ್ರಾಳಿ ಹಾಗೂ ಕುಕ್ಕೆಹಳ್ಳಿ ಗ್ರಾಮಗಳಲ್ಲಿರುವ ಕೊರಗ ಸಮುದಾಯದ 20 ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
‘ಇದು ಕೇವಲ ವಿದ್ಯಾರ್ಥಿವೇತನವಲ್ಲ, ಒಂದು ಸಮುದಾಯದ ಭವಿಷ್ಯಕ್ಕೆ ನೀಡುವ ಆಸರೆ’ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್ ಶೆಟ್ಟಿ, ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ಉಡುಪಿ ಘಟಕದ ಉಪಾಧ್ಯಕ್ಷ ದಿನೇಶ್ ಪೂಜಾರಿ, ಆಶಾ ಚಂದ್ರಶೇಖರ್ ಹಾಗೂ ಭವಿಶ್ ಶಾಮ್ ಉಪಸ್ಥಿತರಿದ್ದರು.

