ನ್ಯಾಯವಾದಿ ಭಾಸ್ಕರ ಹೆಗಡೆ ಹೃದಯಾಘಾತದಿಂದ ನಿಧನ
Monday, November 02, 2026
ಮೂಲ್ಕಿಯ ಮಡಿವಾಳ ಕೆರೆ ನಿವಾಸಿ, ಹೆಸರಾಂತ ನ್ಯಾಯವಾದಿ ಭಾಸ್ಕರ ಹೆಗಡೆ (65) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲ್ಕಿ ಹಾಗೂ ಆಸುಪಾಸಿನ ಪರಿಸರದಲ್ಲಿ ಹಿರಿಯ ವಕೀಲರಾಗಿ ಗುರುತಿಸಿಕೊಂಡಿದ್ದ ಅವರು, ವಕೀಲ ವೃತ್ತಿಯ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಮೂಲ್ಕಿ ಆಟೋ ಚಾಲಕ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಅತ್ಯುತ್ತಮ ನಿರೂಪಕರಾಗಿದ್ದ ಭಾಸ್ಕರ ಹೆಗಡೆ ಅವರು ತಮ್ಮ ವಿಶಿಷ್ಟ ಮಾತುಗಾರಿಕೆ ಹಾಗೂ ನಿರೂಪಣಾ ಶೈಲಿಯಿಂದ ಸ್ಥಳೀಯವಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ನಿಧನಕ್ಕೆ ಗಣ್ಯರು, ವಕೀಲರು ಹಾಗೂ ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.