Ambalapady: ಕೆಸರ್‌ಡ್ ಒಂಜಿ ದಿನ; ಕೆಸರು ಗದ್ದೆ ಆಟೋಟದಲ್ಲಿ ಮಿಂದೆದ್ದ ಜನ
27/07/2025
ಎನ್.ಸಿ ಯೂತ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಆಶ್ರಯದಲ್ಲಿ ಜುಲೈ 27ರ ಭಾನುವಾರ ಆಟಿಡೊಂಜಿ ಕೂಟ, ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮವು ಅಂಬಲಪಾಡಿ ಬಂಕೇರಕಟ್ಟ ಅಂಗನವಾಡಿ ಕೇಂದ್ರ ಬಳಿ ನಡೆಯಿತು. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಉzನ್ಟಿಸಿದರು. ಆಟಿ ತಿಂಗಳ ಆಹಾರ ಪ್ರಾತ್ಯಕ್ಷಿಕೆ ಬಳಿಕ ಸಹಭೋಜನ ನಂತರ ಮಧ್ಯಾಹ್ನ 2 ಗಂಟೆಗೆ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಮಹಿಳೆಯರು, ಮಕ್ಕಳು ಹಾಗೂ ಯುವಕರು ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.