
Mangalore: ಬಹುಕೋಟಿ ವಂಚನೆ ಪ್ರಕರಣ; 2 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ
28/07/2025
ಉದ್ಯಮಿಗಳಿಗೆ 200ಕ್ಕೂ ಅಧಿಕ ಕೋಟಿ ರೂಪಾಯಿ ವಂಚಿಸಿದ್ದಾನೆ ಎನ್ನಲಾದ ಮಂಗಳೂರಿನ ರೋಶನ್ ಸಲ್ದಾನನಿಗೆ ಎರಡು ಪ್ರಕರಣದಲ್ಲಿ ಹೈಕೋರ್ಟ್ ರಿಲೀಫ್ ನೀಡಿದೆ. ಬಿಹಾರ ಮೂಲದ ಉದ್ಯಮಿ 10 ಕೋಟಿ ರೂಪಾಯಿ ಹಾಗೂ ಮಂಗಳೂರಿನ ವ್ಯಕ್ತಿಗೆ ಒಂದೂವರೆ ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ತನಿಖಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಂಗಳೂರಿನಲ್ಲಿ ದಾಲಾಗಿರುವ ಎರಡು ಪ್ರಕರಣಗಳಿಗೆ ಸಂಬ0ಧಿಸಿ ಆರೋಪಿ ರೋಶನ್ ಸಲ್ದಾನನನ್ನು ಆತನ ಮನೆಯಲ್ಲೇ ಬಂಧಿಸಲಾಗಿತ್ತು. ಮಂಗಳೂರಿನ ಸಿಜೆಎಂ ಕೋರ್ಟಿನಲ್ಲಿ ಆರೋಪಿಯ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇತರ ಉದ್ಯಮಿಗಳು ವಂಚಿಸಿರುವ ಬಗ್ಗೆ ದೂರು ನೀಡಿರುವುದರಿಂದ ಜಾಮೀನು ಸಿಕ್ಕಿಲ್ಲ. ಈ ನಡುವೆ ಇದೀಗ ಹೈಕೋರ್ಟ್ ಎರಡು ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದೆ.
ರೋಶನ್ ಸಲ್ದಾನ ಪರವಾಗಿ ಹಿರಿಯ ಕ್ರಿಮಿನಲ್ ವಕೀಲ ಅರುಣ್ ಬಂಗೇರ ವಕಾಲತ್ತು ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಮಂಗಳೂರು, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳ ಉದ್ಯಮಿಗಳಿಗೂ ವಂಚಿಸಿರುವ ಪ್ರಕರಣಗಳು ದಾಖಲಾಗಿರುವುದರಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.