Udupi: ಮೃತ ಮೀನುಗಾರನ ಮನೆಗೆ ಮಾಜಿ ಸಚಿವ ಸೊರಕೆ ಭೇಟಿ; ಕುಟುಂಬಿಕರಿಗೆ ಸಾಂತ್ವನ
22/07/2025
ಇತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ನಾಡದೋಣಿ ಮಗುಚಿ ಮೃತಪಟ್ಟಿದ್ದ ಮೀನುಗಾರ ನೀಲಾಧರ ಜಿ. ತಿಂಗಳಾಯ ಅವರ ಉದ್ಯಾವರ ಗ್ರಾಮದ ಪಿತ್ರೋಡಿಯ ಮನೆಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಭೇಟಿ ನೀಡಿದರು.
ಈ ವೇಳೆ ಮೃತ ನೀಲಾಧರ ತಿಂಗಳಾಯ ಅವರ ಪತ್ನಿ ಹಾಗೂ ಮಗಳು ಸೇರಿದಂತೆ ಕುಟುಂಬಸ್ಥರಿಗೆ ವಿನಯಕುಮಾರ್ ಸೊರಕೆ ಅವರು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ನಿತಿನ್ ಸಾಲ್ಯಾನ್, ಉದ್ಯಾವರ ನಾಗೇಶ್ ಕುಮಾರ್ ರಿಯಾಜ್ ಪಳ್ಳಿ, ಮಾಲತಿ ಸಂದೀಪ್, ರೊಯ್ಸ್ ಉದ್ಯಾವರ, ಅಬಿದ್ ಆಲಿ, ಗಿರೀಶ್ ಕುಮಾರ್, ಶರತ್ ಉದ್ಯಾವರ, ನಿಯಾಜ್ ಪಡುಬಿದ್ರಿ, ಗಿರೀಶ್ ಸುವರ್ಣ, ದಿವಾಕರ್ ಬೊಲ್ಜೆ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.