
Bangalore: 2019ರಲ್ಲಿ ಮತಗಳ್ಳತನದಿಂದಲೇ ತನಗೆ ಸೋಲು- ಮಲ್ಲಿಕಾರ್ಜುನ ಖರ್ಗೆ ಆರೋಪ
08/08/2025
2019ರಲ್ಲಿ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನದಿಂದಲೇ ನನ್ನನ್ನು ಸೋಲಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಮಾತನಾಡಿದರು. 2019ರ ಲೋಕಸಭೆ ಚುನಾವಣೆಯಲ್ಲಿ ನಾನು ಮೊದಲ ಬಾರಿ ಸೋತೆ. ನಾನು ಜೀವನದಲ್ಲಿ ಸೋಲು ಕಂಡಿದ್ದೇ ಅದೇ ಮೊದಲು. 2019ನಲ್ಲಿ ಇದೇ ರೀತಿ ಮತಗಳ್ಳತನ ಮಾಡಿದ್ದಾರೆ. ಆದರೆ ಅದು ನಮಗೆ ಗೊತ್ತಾಗಿಲ್ಲ. ಸುಮಾರು 5 ಮತ ಕ್ಷೇತ್ರಗಳಲ್ಲಿ ನಕಲಿ ವೋಟ್ ಮಾಡಿ ನನ್ನನ್ನು ಸೋಲಿಸಿದ್ದಾರೆ ಎಂದರು.
ಕೇ0ದ್ರ ಸರ್ಕಾರಕ್ಕೆ ನೈತಿಕತೆ ಇಲ್ಲ. ನಾವು ಎಲ್ಲಾ ರಾಜ್ಯಗಳಲ್ಲಿ ಇಂಥ ತಪ್ಪನ್ನು ಹುಡುಕಿ ತೆಗೆದುಕೊಳ್ಳುತ್ತಿದ್ದೇವೆ. ನಕಲಿ ವೋಟಿಂಗ್ ಮಾಡಿ ಮೋದಿ ದೇಶವನ್ನು ಆಳುತ್ತಿದ್ದಾರೆ. ಚುನಾವಣೆಗಳು ಆಗುತ್ತವೆ ಹೋಗುತ್ತವೆ. ಚುನಾವಣೆ ರಕ್ಷಣೆ ಮಾಡುವುದು ನಿಮ್ಮೆಲ್ಲರ ಕರ್ತವ್ಯ. ಪ್ರಧಾನಿ ಮೋದಿ ನಮ್ಮ ನಾಯಕರನ್ನು ಇಡಿ, ಸಿಬಿಐ ಮೂಲಕ ಹೆದರಿಸುತ್ತಿದೆ. ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡುತ್ತಿದ್ದಾರೆ. ಈಗಲೂ ಅದೇ ಚಾಳಿ ಮುಂದುವರಿದಿದೆ. ಅದಕ್ಕಾಗಿ ಅವರಿಗೆ ಬುದ್ದಿ ಕಲಿಸಬೇಕಾಗಿದೆ ಎಂದರು.