Bangalore: ಬಿಜೆಪಿಯಿಂದ ಸಂವಿಧಾನದ ಮೇಲೆ ಪ್ರಹಾರ- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ
08/08/2025
ಬಿಜೆಪಿ ನಾಯಕರು ಸಂವಿಧಾನದ ಮೇಲೆ ಪ್ರಹಾರ ಮಾಡಿ, ಸಂವಿಧಾನವನ್ನು ಮುಗಿಸಲು ಹುನ್ನಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮರಗಳ್ಳತನ ನಡೆದಿದೆ ಎಂದು ಆರೋಪಿಸಿ ಕೈಗೊಂಡ ಪ್ರತಿಭಟನಾಸಭೆಯಲ್ಲಿ ಅವರು ಮಾತನಾಡಿದರು. ಸಂವಿಧಾನದ ಪುಸ್ತಕವನ್ನು ತೋರಿಸುತ್ತಾ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಬಿಜೆಪಿ ನಾಯಕರು ಪವಿತ್ರ ಗ್ರಂಥದ ಮೇಲೆ ಪ್ರಹಾರ ಮಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ಕೇಂದ್ರ ಮಹಾದೇವಪುರ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಮೋಸ ಮಾಡಿದೆ. 6 ಮತಗಳಲ್ಲಿ ಒಂದು ಮತ ಕಳ್ಳತನ ಮಾಡಿದ್ದಾರೆ. ಭಾವಚಿತ್ರವಿಲ್ಲದ 4 ಸಾವಿರ ಪ್ರಕರಣಗಳು ದೊರೆತಿವೆ. ಒಬ್ಬನೇ ಮತದಾರನಿಂದ ಹಲವು ರಾಜ್ಯಗಳಲ್ಲಿ ಮತದಾನವಾಗಿದೆ ಎಂದು ಆರೋಪಿಸಿದರು. ( Credit: ANI )