
Udupi: ನೆಹರೂ ಸ್ಪೋರ್ಟ್ಸ್ & ಕಲ್ಚರಲ್ ಎಸೋಸಿಯೇಶನ್‌ನಿಂದ ಸ್ವಾತಂತ್ರ‍್ಯೋತ್ಸವ
15/08/2025
ಉಡುಪಿ ನೆಹರು ಸ್ಪೋರ್ಟ್ಸ್ & ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮವನ್ನು ಅಲೆವೂರಿನ ನೆಹರು ಕ್ರೀಡಾಂಗಣದ ಬಳಿ ಆಚರಿಸಲಾಯಿತು.
ಉಡುಪಿ ಅಮೃತ್ ಲ್ಯಾಬ್‌ನ ಮಾಲಕರಾದ ಎ. ರಾಘವೇಂದ್ರ ಕಿಣಿ ಧ್ಹಜಾರೋಹಣ ನೆರವೇರಿಸಿದರು. ನೆಹರು ಸ್ಪೋರ್ಟ್ಸ್ನ ಗೌರವಾಧ್ಯಕ್ಷ ಅಲೆವೂರು ಹರೀಶ್ ಕಿಣಿ, ಅಧ್ಯಕ್ಷರಾದ ದಯಾನಂದ ಅಂಚನ್, ಗೌರವ ಸಲಹೆಗಾರರಾದ ಮುರಳೀಧರ್ ಭಟ್ ಹಾಗೂ ಸತೀಶ್ ಪೂಜಾರಿ, ಎ. ಸತೀಶ್ ಕಿಣಿ, ಪ್ರತಾಪ್ ಕುಂದರ್ ಮತ್ತಿತರರಿದ್ದರು.