Udupi: ಜುಲೈ ತಿಂಗಳ ಗೃಹಲಕ್ಷ್ಮಿ ಹಣ 10 ದಿನದೊಳಗಡೆ ಬಿಡುಗಡೆ- ಸಚಿವೆ ಹೆಬ್ಬಾಳ್ಕರ್
14/08/2025
ಗೃಹ ಲಕ್ಷ್ಮೀ ಯೋಜನೆಯ ಬಾಕಿ ಉಳಿದಿರುವ ಜುಲೈ ತಿಂಗಳಿನ ಹಣವನ್ನು ಗಣೇಶ ಚತುರ್ಥಿಯೊಳಗಡೆ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯಲ್ಲಿ ಸುದ್ಧಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಈಗಾಗಲೇ ಜೂನ್ ತಿಂಗಳಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜುಲೈ ತಿಂಗಳ ಗೃಹ ಲಕ್ಷ್ಮೀ ಹಣ ಇನ್ನು 10 ದಿನದೊಳಗಡೆ ಬಿಡುಗಡೆಯಾಗಲಿದೆ ಎಂದರು.