
Udupi: ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆ
15/08/2025
ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮವನ್ನು ಬ್ರಹ್ಮಗಿರಿಯ ಲಯನ್ಸ್ ಭವನ ವಠಾರದಲ್ಲಿ ಆಚರಿಸಲಾಯಿತು.
ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಿಕ್ಕ ಸ್ವಾತಂತ್ರ‍್ಯವನ್ನು ಬಾಹ್ಯ ಹಾಗೂ ಆಂತರಿಕ ದುಷ್ಟ ಶಕ್ತಿಗಳಿಂದ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಮಾಡಿದರೆ ಅದುವೇ ದೇಶಪ್ರೇಮ ಮೆರೆದಂತೆ ಎಂದರು.
ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ಕಾರ್ಯದರ್ಶಿ ರಾಧಿಕಾ ಶೆಣೈ, ಕೋಶಾಧಿಕಾರಿ ಸುಜಯಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಪ್ರಕಾಶ್ ಎಂ.ಡಿ. ಭಟ್ ಸ್ವಾಗತಿಸಿ, ವಂದಿಸಿದರು.