ಇಂದಿನಿಂದ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಜಾರಿ; ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ

ಇಂದಿನಿಂದ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಜಾರಿ; ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ


ಸ್ವಾತಂತ್ರ್ಯೋತ್ಸವ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಾಹನ ಚಾಲಕರಿಗೆ ಸಿಹಿ ಸುದ್ದಿ ನೀಡಿದೆ. ಆಗಸ್ಟ್ 15ರಂದು ದೇಶಾದ್ಯಂತ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಆರಂಭವಾಗಲಿದೆ. 


ಈ ಪಾಸ್ ತೆಗೆದುಕೊಳ್ಳುವವರು ವರ್ಷವಿಡೀ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಪಾಸ್ ಬಗ್ಗೆ ಘೋಷಣೆ ಮಾಡಿದ್ದಾರೆ.

ಈ ಹೊಸ ವಾರ್ಷಿಕ ಪಾಸ್ ಮೂಲಕ ಕೇವಲ 15 ರೂ.ಗೆ ಟೋಲ್ ಪ್ಲಾಜಾ ದಾಟಬಹುದು ಎಂದು ಅವರು ಹೇಳಿದರು. ಈ ಪಾಸ್‌ನ ಬೆಲೆ 3000 ರೂ., ಇದರಲ್ಲಿ 200 ಟ್ರಿಪ್‌ಗಳು ಸೇರಿವೆ. ಒಂದು ಟ್ರಿಪ್ ಎಂದರೆ ಒಮ್ಮೆ ಟೋಲ್ ಪ್ಲಾಜಾ ದಾಟುವುದು. ಅಂದರೆ ಪ್ರತಿ ಟ್ರಿಪ್‌ಗೆ ಕೇವಲ 15 ರೂ. ವೆಚ್ಚವಾಗುತ್ತದೆ.  

ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಒಂದು ರೀತಿಯ ಪ್ರಿಪೇಯ್ಡ್ ಟೋಲ್ ಯೋಜನೆಯಾಗಿದೆ. ಇದನ್ನು ವಿಶೇಷವಾಗಿ ಕಾರುಗಳು, ಜೀಪ್‌ಗಳು, ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. 60 ಕಿ.ಮೀ ವ್ಯಾಪ್ತಿಯೊಳಗಿನ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಸುವವರಿಗೆ ಸುಲಭ ಮತ್ತು ಕೈಗೆಟುಕುವ ಟೋಲ್ ಪಾವತಿಗಳನ್ನು ಒದಗಿಸುವುದು ಈ ಪಾಸ್‌ನ ಮುಖ್ಯ ಉದ್ದೇಶವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು.

Ads on article

Advertise in articles 1

advertising articles 2

Advertise under the article